ಕುಮಟಾ : ಡಿ.8 ರಿಂದ 12 ವರೆಗೆ ತಾಂಡವ ಕಲಾ ನಿಕೇತನ ಸಂಸ್ಥೆಯ ಆಶ್ರಯದಲ್ಲಿ ಪಟ್ಟಣದ ಮಣಿಕ ಮೈದಾನದಲ್ಲಿ ನಡೆಸಲು ಯೋಜಿಸಿದ್ದ ಕುಮಟಾ ವೈಭವ ಕಾರ್ಯಕ್ರಮ ಕಾರಣಾಂತರಗಳಿಂದ ರದ್ದುಪಡಿಸಲಾಗಿದೆ ಎಂದು ತಾಂಡವ ಕಲಾ ನಿಕೇತನ ಸಂಸ್ಥೆಯ ಅಧ್ಯಕ್ಷ ಮಂಜುನಾಥ ನಾಯ್ಕ ತಿಳಿಸಿದರು. ಅವರು ಇಂದು ಕುಮಟಾ ಪಟ್ಟಣದ ಸುವರ್ಣಕಾರರ ಬ್ಯಾಂಕ್ ಸಭಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜ್ಯ ಹಾಗೂ ದೇಶದಲ್ಲಿ ಹೊಸ ವೈರಸ್ ಕಾಣಿಸಿಕೊಂಡಿದ್ದು, ಇದರಿಂದ ಜನರು ಭಯ ಭೀತರಾಗಿದ್ದಾರೆ. ಈ ಕಾರಣದಿಂದ ಕುಮಟಾ ವೈಭವ ಎಂಬ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮ ರದ್ದುಪಡಿಸಲಾಗಿದೆ. ಜನರಲ್ಲಿ ಭೀತಿ ಕಡಿಮೆಯಾದ ನಂತರ ಏರ್ಪಡಿಸುವ ಬಗ್ಗೆ ಯೋಚಿಸಲಾಗುತ್ತದೆ ಎಂದರು.

RELATED ARTICLES  ಹಿರೇಗುತ್ತಿ ವ್ಯವಸಾಯ ಸಂಘದ ಅಧ್ಯಕ್ಷರಾಗಿ ನೀಲಕಂಠ ನಾಯಕ ಉಪಾಧ್ಯಕ್ಷರಾಗಿ ಹರೀಶ ನಾಯಕ ಆಯ್ಕೆ

ಕುಮಟಾ ವೈಭವ ಆಚರಣಾ ಸಮಿತಿಯವರು ಶಾಸಕರನ್ನು ಸಂಪರ್ಕಿಸಿಲ್ಲ ಎಂದು ದಿನಕರ ಶೆಟ್ಟಿ ಹೇಳಿಕೆ ನೀಡಿದ್ದಾರೆ. ವಿಧಾನಪರಿಷತ್ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶಾಸಕ ದಿನಕರ ಶೆಟ್ಟಿ ಭೇಟಿಯಾಗಿಲ್ಲ ಎಂದರು. ತಾಂಡವ ಕಲಾ ನಿಕೇತನ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಧನ ಸಹಾಯ ಪಡೆದಿದೆ ಎಂದು ಶಾಸಕರು ಹೇಳಿಕೆ ನೀಡಿದ್ದಾರೆ. ಒಂದೇ ಒಂದು ರೂಪಾಯಿ ಪಡೆದಿಲ್ಲ. ಅವರ ಬಳಿ ದಾಖಲೆಗಳಿದ್ದರೆ ಬಿಡುಗಡೆಗೊಳಿಸಲಿ ಎಂದು ಸವಾಲು ಹಾಕಿದರು.

RELATED ARTICLES  ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಹೆಡೆಮುರಿ ಕಟ್ಟಿದ ಪೊಲೀಸರು

ದಿನಕರ ಶೆಟ್ಟಿ ಮುಂದಾಳತ್ವದಲ್ಲಿ ನಡೆದ ಕುಮಟಾ ಹಬ್ಬಕ್ಕೆ ಸರ್ಕಾರದಿಂದ ಹಣ ಪಡೆದಿದ್ದಾರೆ. ಅದೊಂದು ಸಾಂಸ್ಕೃತಿಕ ಹಬ್ಬವಲ್ಲ. ರಾಜಕೀಯ ಉದ್ದೇಶದಿಂದ ಅವರು ಆಯೋಜನೆ ಮಾಡಿದ್ದಾರೆ. ನಾನು ಹಣ ಪಡೆದಿಲ್ಲ ಎಂಬುದನ್ನು
ಎಲ್ಲಿ ಬೇಕಾದರೂ ಹೇಳುತ್ತೇನೆ. ಶಾಸಕರು ಬೇಕಾಬಿಟ್ಟಿ ಹೇಳಿಕೆ ನೀಡುವುದನ್ನು ಕಡಿಮೆ ಮಾಡಲಿ, ಇಂತಹ ಹೇಳಿಕೆಗಳು ಅವರ ವ್ಯಕ್ತಿತ್ವಕ್ಕೆ ಶೋಭೆ ತರವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಕುಮಟಾ ವೈಭವ ಆಚರಣಾ ಸಮಿತಿಯ ಪ್ರಮುಖರಾದ ನಾಗೇಶ ನಾಯ್ಕ ಕಲಭಾಗ, ಜಯಾ ಶೇಟ್ ಸೇರಿದಂತೆ ಮತ್ತಿತರರು ಇದ್ದರು.