ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಪ್ರೊ.ನಿರಂಜನ ವಾನಳ್ಳಿ ನೇಮಕವಾಗಿದ್ದಾರೆ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ನಿರಂಜನ ವಾನಳ್ಳಿ ಉತ್ತರ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕ ಮಾಡಿ ರಾಜಭವನದಿಂದ ಅಧಿಸೂಚನೆ ಹೊರಡಿಸಲಾಗಿದೆ. ಅಧಿಕಾರ ವಹಿಸಿಕೊಂಡ ದಿನದಿಂದ 4 ವರ್ಷಗಳ ಅವಧಿಗೆ ಅವರು ಕುಲಪತಿಯಾಗಿ ಇರಲಿದ್ದಾರೆ.ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆ ವಾನಳ್ಳಿಯ, ಜಿಲ್ಲೆಯ ಶಿರಸಿ ತಾಲೂಕಿನ ವಾನಳ್ಳಿಯವರು.

RELATED ARTICLES  ಭಾರತದಲ್ಲಿ 5.62 ಲಕ್ಷ ಜನರ ಫೇಸ್‌ಬುಕ್‌ ಖಾತೆಗಳ ಮೂಲಕ ಮಾಡಿದ ಮಾಹಿತಿ ಕಳವು.

ಕೋಲಾರದಲ್ಲಿನ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಮೊದಲ ಕುಲಪತಿಯಾಗಿ ಪ್ರೊ.ಟಿ.ಡಿ.ಕೆಂಪರಾಜು 26 ಜುಲೈ, 2017 ರಲ್ಲಿ ನೇಮಕಗೊಂಡಿದ್ದರು. ಅವರ 4 ವರ್ಷಗಳ ಅವಧಿ 2021ರ ಜುಲೈ 25ಕ್ಕೆ ಪೂರ್ಣಗೊಂಡಿತ್ತು. ಬಳಿಕ ಹಿರಿಯ ಡೀನ್ ಡಾ.ಡಿ.ಕುಮುದಾ ಅವರನ್ನು ಪ್ರಭಾರ ಕುಲಪತಿಯನ್ನಾಗಿ ನೇಮಕ ಮಾಡಲಾಗಿತ್ತು.

RELATED ARTICLES  ಗಗನಕ್ಕೆರುತ್ತಿರುವ ಪೆಟ್ರೋಲ್, ಡೀಸೆಲ್ ವ್ಯಾಟ್ ಇಳಿಕೆ ಅಸಾಧ್ಯ: ಸಿಎಂ ಎಚ್ ಡಿ ಕುಮಾರಸ್ವಾಮಿ.

ಈಗ ಕುಲಪತಿ ಶೋಧನಾ ಸಮಿತಿ ಶಿಫಾರಸ್ಸಿನ ಆಧಾರದ ಮೇರೆಗೆ ಪ್ರಾಧ್ಯಾಪಕ ಪ್ರೊ.ನಿರಂಜನ ವಾನಳ್ಳಿ ಅವರನ್ನು ನೂತನ ಕುಲಪತಿಯಾಗಿ ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.