ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದ ಆಶ್ರಯದಲ್ಲಿ ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಕುರಿತಾಗಿ ಭಾಷಣ ಹಾಗೂ ಕಂಠಪಾಠ ಸ್ಪರ್ಧೆ ಹಮ್ಮಿಕೊಂಡಿದೆ. ಇದರ ಅಂಗವಾಗಿ ಶಿರಸಿ ತಾಲೂಕಾ ಮಟ್ಟದ ಸ್ಪರ್ಧೆ ಡಿ.3ರ ಶುಕ್ರವಾರ ಮುಂಜಾನೆ 10 ಘಂಟೆಗೆ ನಗರದ ಲಯನ್ಸ್ ಶಿಕ್ಷಣ ಸಂಸ್ಥೆಯ ಲಯನ್ ಭವನದಲ್ಲಿ ನಡೆಯಲಿದೆ.

ಈ ಸ್ಪರ್ಧೆಯ ಉದ್ಘಾಟನೆಯನ್ನು ಲಯನ್ಸ್ ಕ್ಲಬ್ ಉಪಾಧ್ಯಕ್ಷ ತ್ರಿವಿಕ್ರಮ ಪಟವರ್ಧನ ಮಾಡಲಿದ್ದಾರೆ. ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್ವಿಜಿ ಭಟ್ ಹಾಗೂ ಶ್ರೀ ಭಗವದ್ಗೀತಾ ಅಭಿಯಾನದ ಶಿರಸಿ ತಾಲೂಕಿನ ಕಾರ್ಯಾಧ್ಯಕ್ಷ ವೆಂಕಟೇಶ ನಾಯ್ಕ ಉಪಸ್ಥಿತಿ ಇರಲಿದ್ದಾರೆ. ಶಿರಸಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾಲೇಜ್, ದೇವಸ್ಥಾನ ಹೀಗೆ 50ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಭಗವದ್ಗೀತೆಯ 3 ಅಧ್ಯಾಯದ ಪಠಣ ನಡೆಯುತ್ತಿದೆ.

RELATED ARTICLES  ಉತ್ತರಕನ್ನಡದ ಪ್ರಮುಖ ತಾಲೂಕಿನಲ್ಲಿ ಇಂದಿನ ಅಡಿಕೆ ಧಾರಣೆ

ವಿದ್ಯಾಲಯಗಳಲ್ಲಿ ನಡೆಯುತ್ತಿರುವ ಪಠಣ ಕಾರ್ಯಕ್ರಮದಲ್ಲಿ ಎಲ್ಲ ಧರ್ಮದ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಒಂದು ವಿಶೇಷವಾಗಿದೆ.

ಶಿರಸಿಯ ಎಮ್ ಇ ಎಸ್ ಪದವಿಪೂರ್ವ ವಿದ್ಯಾಲಯದಲ್ಲಿ ಡಿ.8 ಬುಧವಾರ ಮುಂಜಾನೆ 10 ಘಂಟೆಯಿಂದ ಜಿಲ್ಲಾಮಟ್ಟದ ಸ್ಪರ್ಧೆ ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಶಿರಸಿ ನಗರ ಹಾಗೂ ತಾಲೂಕಿನ ಮಾತೃಮಂಡಲದ ಸದಸ್ಯರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂದು ಸಂಸ್ಥಾನದ ಭಗವದ್ಗೀತಾ ಅಭಿಯಾನ ಸಮಿತಿಯ ಪ್ರಕಟನೆ ತಿಳಿಸಿದೆ.

RELATED ARTICLES  ಚಿರನಿದ್ದೆಗೆ ಜಾರಿದಯುವ ಸಿ.ಎ.ವಿಷ್ಣು ಹೆಬ್ಬಾರ