ಹೊನ್ನಾವರ : ತಾಯಂದಿರ ಸ್ವಾಸ್ಥ್ಯ ಹಾಗೂ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೆ ತಂದ ಉಜ್ವಲ ಯೋಜನೆಯಿಂದ ಕಡುಬಡವರಿಗೂ ಹೆಚ್ಚಿನ ಅನುಕೂಲತೆಯನ್ನು ಒದಗಿಸಿದೆ ಎಂದು ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಹೇಳಿದರು. ಹೊನ್ನಾವರ ತಾಲೂಕಿನ ತೊಳಸಾಣಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಸಹಕಾರದಿಂದ ಹಮ್ಮಿಕೊಂಡ ಉಚಿತ ಗ್ಯಾಸ್ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಹಾಗೂ ಹಿಂದುಳಿದ ಭಾಗಗಳಲ್ಲಿ ಫಲಾನುಭವಿಗಳು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಅಲೆಯದೇ ಯಾವುದೇ ರೀತಿಯಲ್ಲೂ ಅನಾನುಕೂಲವಾಗದೇ ಸುಲಭವಾಗಿ ಈ ಯೋಜನೆಯಡಿ ಗ್ಯಾಸ್ ಸಂಪರ್ಕವನ್ನು ಪಡೆದುಕೊಳ್ಳಬೇಕೆಂಬ ಕಳಕಳಿ ಹೊಂದಿದ್ದೇವೆ ಎಂದರು.
ಗಂಗೆ ಡಿ. ಮರಾಠಿ, ರತ್ನಾ ಪಿ. ಮರಾಠಿ, ಪಾರ್ವತಿ ಆರ್. ಮರಾಠಿ, ರೇಖಾ ಬಿ. ನಾಯ್ಕ, ಮೀನಾಕ್ಷಿ ಡಿ. ಮರಾಠಿ, ಗಂಗೆ ಜಿ. ಮರಾಠಿ, ಮಮತಾ ಜಿ ನಾಯ್ಕ, ಪಾರ್ವತಿ ಜೆ. ಮರಾಠಿ, ಪಾರ್ವತಿ ಡಿ. ಮರಾಠಿ, ಯಂಕಿ ಕೆ. ಮರಾಠಿ, ಲಕ್ಷ್ಮಿ ಆರ್. ನಾಯ್ಕ, ಗೋಪಿ ಆರ್. ನಾಯ್ಕ ಮುಂತಾದ ಫಲಾನುಭವಿಗಳು ಉಚಿತ ಗ್ಯಾಸ್ ಕಿಟ್ ಗಳನ್ನು ಪಡೆದುಕೊಂಡು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಕಲಾ ಶಾಸ್ತ್ರಿ, ವೆಂಕಟರಮಣ ಹೆಗಡೆ, ನಾರಾಯಣ ಎಮ್. ಹೆಗಡೆ, ಟಿ. ಎಸ್. ನಾಯ್ಕ, ಆಲೂ ಪಿಲ್ಲೂ ಮರಾಠಿ, ಜಿ.ಜಿ.ಭಟ್, ಆರ್. ಎಮ್. ಹೆಗಡೆ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.