ಕಾರವಾರ: ಸರಕಾರಿ ಎಂಜಿನಿಯರಿಂಗ್ ಕಾಲೇಜನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವಲ್ಲಿ ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ್ಯಾಂತ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸಂಘಟನಾ ಕಾರ್ಯದರ್ಶಿ ಸಿದ್ಧು ಗೌಡಾ ಮಾತನಾಡಿ ಜಿಲ್ಲೆಯಲ್ಲಿ ಇಂಜಿನೀಯರಿಂಗ್ ಕಾಲೇಜ ಪ್ರಾರಂಭವಾಗಿ 4 ವರ್ಷಗಳು ಕಳೆದರು ಯಾವುದೆ ಸ್ವಂತ ಕಟ್ಟಡ ಇಲ್ಲದೆ ಪಾಳುಬಿದ್ದ ಕಟ್ಟಡದಲ್ಲಿ ನಡೆಯುತಿತ್ತು. ಬಳಿಕ ಸ್ವಂತ ಕಟ್ಟಡವನ್ನು ಕಟ್ಟಲು ಒಂದು ಅವಕಾಶ ಸಿಕ್ಕ ಬಳಿಕ ಮಾಜಾಳಿಯಲ್ಲಿ ನಿರ್ಮಾಣವಾಗಿದ್ದು ಅಲ್ಲಿ ಎಲ್ಲಾ ಸೌಲಭ್ಯಗಳಾದ ಶೌಚಾಲಯ, ವಿದ್ಯುತ್, ನೀರು ಕಾಲೇಜು ಪ್ರಾರಂಭಿಸಲು ಮೂಲಭೂತ ಎಲ್ಲಾ ಸೌಕರ್ಯಗಳು ಸಿದ್ಧವಾಗಿವೆ.

 

ಪ್ರಾಂಶಪಾಲರಿಗೆ ಈ ಹಳೆಕಟ್ಟಡದ ಕಾಲೇಜನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರಿಂದ ಆದೇಶವನ್ನು ಮಾಡಲಾಗಿದೆ. ಆದೇಶದ ಮೇರೆಗೆ ಪ್ರಭಾರಿ ಪ್ರಾಚಾರ್ಯ ಡಾ.ಶಾಂತಲಾ ಬಿ. ಇಲ್ಲಿನ ಅನೇಕ ಸಮಸ್ಯೆಗಳನ್ನು ಕಂಡು ಈ ಕಾಲೇಜನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಮುಂದಾದರು. ಈ ಸಮಯದಲ್ಲಿ ಜಿಲ್ಲಾಧಿಕಾರಿಗಳು ಉಸ್ತುವಾರಿ ಸಚಿವರು ಸಂಬಂಧಪಟ್ಟ ಇಲಾಖೆಯಿಂದ ಒಪ್ಪಿಗೆಯನ್ನು ಬಂದಿದರಿಂದ ಸ್ಥಳಿಯ ಶಾಸಕರಿಗೂ ಗಮನಕ್ಕೆ ತಂದು ಸ್ಥಳಾಂತರಿಸಲು ಮುಂದಾದಾಗ ಇದನ್ನು ಇಲ್ಲಿನ ಶಾಸಕರು ಒಪ್ಪಿಗೆ ಸೂಚಿಸಿದೆ ವಿರೋಧಿಸಿದ್ದಾರೆ. ವಿರೋಧ ಯಾಕೆ ಎಂದು ಕೇಳಿದ ಪ್ರಾಚಾರ್ಯರನ್ನು ಉದ್ದೇಶ ಪೂರ್ವಕವಾಗಿ ತೆಗೆದು ಹಾಕಲು ಶಾಸಕರು ಯಶಸ್ವಿಯಾಗಿದ್ದಾರೆ. ಇದರಿಂದ ಅಭಿವೃದ್ಧಿ ಮಾಡಬೇಕಾದ ವ್ಯಕ್ತಿಯು ಶಿಕ್ಷೆ ಅನುಭವಿಸುವ ಸ್ಥಿತಿ ಬಂದಿರುವುದು ಖಂಡನೀಯ ಎಂದರು.
ನೂರಾರು ವಿದ್ಯಾರ್ಥಿಗಳು ಸರಕಾರಿ ಇಂಜೀನಿಯರಿಂಗ ಕಾಲೇಜಿನಲ್ಲಿ ತರಗತಿಯ ಕೊಠಡಿ, ಲ್ಯಾಬ್, ಶೌಚಾಲಯ ಇಲ್ಲದೆ ಪರದಾಡುತ್ತಿದ್ದಾರೆ.. ಅಷ್ಟೇ ಅಲ್ಲದೇ ಬೇರೆ ಊರುಗಳಿಂದ ಬಂದಿರುವ ವಿದ್ಯಾರ್ಥಿಗಳು ಹಾಸ್ಟೆಲ್ ವ್ಯವಸ್ಥೆ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಹೂಸ ಕಟ್ಟಡವು ನಿರ್ಮಾಣ ಆಗಿದ್ದು ಈ ಕಟ್ಟಡಕ್ಕೆ ಕಾಲೇಜು ಪ್ರಾರಂಭಿಸಲು ನಿರ್ದೇಶಕರಿಂದ ಅನುಮತಿ ಬಂದಿದ್ದರೂ ಇಲ್ಲಿನ ಸ್ಥಳಿಯ ರಾಜಕೀಯದಿಂದ ಅದನ್ನು ನಿಲ್ಲಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇದು ವಿದ್ಯಾರ್ಥಿಯ ವಿರೋಧ ನಿತಿಯಾಗಿದ್ದು ಇದನ್ನು ವಿದ್ಯಾರ್ಥಿ ಪರಿಷತ್ ಎಂದರು.

RELATED ARTICLES  ದ್ವಿತೀಯ ಪಿ.ಯು.ಸಿ.ಕಾಮರ್ಸ್ ವಿಭಾಗದಲ್ಲಿ ಗಮನಾರ್ಹ ಸಾಧನೆಗೈದ ಗ್ರಾಮೀಣ ಪ್ರತಿಭೆ ಕಡತೋಕಾ ದ ಎಚ್.ಎಸ್.ವಿಶಾಲ್.

 
ಆದರೆ ವಿದ್ಯಾರ್ಥಿಗಳನ್ನು ಹಾದಿ ತಪ್ಪಿಸಲು ಹೂಸ ಕಟ್ಟಡದಲ್ಲಿ ಯಾವುದೇ ವ್ಯವಸ್ಥೆಗಳಿಲ್ಲ. ಎಂದು ವಿದ್ಯಾರ್ಥಿಗಳಿಗೆ ಸುಳ್ಳು ಸಂದೆಶವನ್ನು ನೀಡಿ ಕಾಲೇಜಿನಲ್ಲಿ ರಾಜಕೀಯ ವಿಷಬೀಜವನ್ನು ಬಿತ್ತುತ್ತಿದ್ದಾರೆ. ನಿರ್ದೇಶಕರ ಆದೇಶ ಮೇರೆಗೆ ಒಂದು ವಾರದ ಒಳಗಾಗಿ ಈ ಕಾಲೇಜುವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಒಂದು ವಾರದ ಒಳಗಾಗಿ ಎಲ್ಲ ಸಮಸ್ಯೆಯನ್ನು ಬಗೆಹರಿಸಿದ್ದರೆ ಶಾಸಕರ ಮನೆಯ ಮುಂಭಾಗ ಪ್ರತಿಭಟಣೆ ಧರಣೆ ಮಾಡಲಾಗುವುದು ಎಂದು ಈ ಸಂದರ್ಭದಲ್ಲಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರಾದ ಶ್ವೇತಾ, ಸೌಮ್ಯಾ, ರಶ್ಮಿ, ಭಾನುಕುಮಾರ, ಅನಿಲ, ಸಂತೋಷ, ಕಿರಣ, ಆಂಜನೇಯ ಮುಂತಾದವರು ಇದ್ದರು.

RELATED ARTICLES  ಬಿಜೆಪಿಗೆ ಶಿವರಾಮ ಹೆಬ್ಬಾರ್: ನಾಳೆ ಬೆಂಗಳೂರಿನಲ್ಲಿ ಅಧಿಕೃತ ಸೇರ್ಪಡೆ..!