ನ್ಯೂಸ್ ಡೆಸ್ಕ್ : ಬುಧವಾರ ಮಧ್ಯಾಹ್ನ ತಮಿಳುನಾಡಿನ ಕೂನೂರಿನಲ್ಲಿ ಭಾರತೀಯ ವಾಯುಸೇನಾ ಹೆಲಿಕಾಪ್ಟರ್‌ವೊಂದು ಪತನಗೊಂಡಿದೆ ಈ ಎಂಐ-17 ಹೆಲಿಕಾಪ್ಟರ್‌ನಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್, ಇಬ್ಬರು ಪೈಲಟ್‌ಗಳು, ಬ್ರಿಗೇಡಿಯರ್ ಶ್ರೇಣಿಯ 14 ಮಂದಿ ಸಿಬ್ಬಂದಿ ಇದ್ದರು. ಏಳು ಮೃತದೇಹಗಳು ಪತ್ತೆಯಾಗಿದ್ದು, ಯಾರದ್ದು ಎಂಬ ಮಾಹಿತಿ ತಿಳಿದು ಬಂದಿಲ್ಲ. ಘಟನೆಯಲ್ಲಿ ಗಾಯಗೊಮಡವರನ್ನು ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಡಿಎಸ್ ಬಿಪಿನ್ ರಾವತ್ ಆರೋಗ್ಯ ಸ್ಥಿತಿ ಗಂಭೀರ ಎನ್ನಲಾಗಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ನಿಖರವಾಗಿ ಯಾವುದೇ ವರದಿಗಳು ಸೇನಾ ವಿಭಾಗದಿಂದ ತಿಳಿದುಬಂದಿಲ್ಲ.
ಈ ಅಪಘಾತದಿಂದ ಹೆಲಿಕಾಪ್ಟರ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಊಟಿ ಸ್ಟಾಫ್ ಕಾಲೇಜಿನಲ್ಲಿ ಸಿಡಿಎಸ್ ರಾವತ್ ಉಪನ್ಯಾಸ ಕಾರ್ಯಕ್ರಮವಿತ್ತು ಎಂದು ಹೇಳಲಾಗುತ್ತಿದೆ. ಇಲ್ಲಿಂದ ಸೂರೂರಿಗೆ ಹೋಗಿ ಅಲ್ಲಿಂದ ದೆಹಲಿಗೆ ಮರಳಬೇಕಿತ್ತು. ಸಿಡಿಎಸ್ ಜನರಲ್ ಬಿಪಿನ್ ರಾವತ್ ಕೂಡ ಹೆಲಿಕಾಪ್ಟರ್‌ನಲ್ಲಿದ್ದರು ಎನ್ನಲಾಗಿದೆ.