ಯಲ್ಲಾಪುರ: ತಾಲೂಕಿನ ಆನಗೋಡ ಗ್ರಾಪಂ ವ್ಯಾಪ್ತಿಯ ಬಿಸಗೋಡದ ನಾಗರಕಾನ್ ಎಂಬಲ್ಲಿ ವಾಸುದೇವ ಬಾಳೆಕೊಡ್ಲ ಎಂಬವರಿಗೆ ಸೇರಿದ ಆಕಳ ಕರುವಿನ ಮೇಲೆ ಚಿರತೆ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡಿದೆ. ಕರವುನ್ನು ಕೊಟ್ಟಿಗೆಯಲ್ಲಿ ಕಟ್ಟಿದ್ದರಿಂದ ಹೊತ್ತೊಯ್ಯಲು ಸಾಧ್ಯವಾಗಿಲ್ಲ, ನಂತರ ಅದನ್ನು ಬಿಟ್ಟು ನಾಯಿಯನ್ನು ಹಿಡಿದೊಯ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಭಾಗದಲ್ಲಿ ದಿನೇ ದಿನೇ ಚಿರತೆಯ ಕಾಟ ಹೆಚ್ಚಿದ್ದು, ಕಳೆದ ಎರಡು ವಾರಗಳ ಹಿಂದೆ ಮೂರು ದನಗಳನ್ನು ಕೊಂದಿತ್ತು. ಚಿರತೆ ಹಾವಳಿ ನಿಯಂತ್ರಿಸುವoತೆ ಅರಣ್ಯ ಇಲಾಖೆಯನ್ನು ಸ್ಥಳೀಯರು ಆಗ್ರಹಿಸಿದ್ದಾರೆ.

RELATED ARTICLES  ರಸ್ತೆ ಅಪಘಾತ : ಜಿ.ಪಂ ಸದಸ್ಯ ರತ್ನಾಕರ್ ನಾಯ್ಕ ಹಾಗೂ ವಕೀಲ ಆರ್. ಜಿ ನಾಯ್ಕರಿಗೆ ಪೆಟ್ಟು.

ಶಿರಸಿಯಲ್ಲಿ ನಾಯಿ ಹೊತ್ತೊಯ್ದ ಚಿರತೆ

ತಾಲೂಕಿನ ತಾರಗೋಡ ಹಾಗೂ ಭೈರುಂಬೆ ವ್ಯಾಪ್ತಿಯ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿರುವ ಚಿರತೆಯು ಪಟ್ಟನಮನೆ ಸಮೀಪದ ರವಿ ಹೆಗಡೆ, ಹಳದೋಟ ಅವರ ಮನೆಯ ನಾಯಿಯನ್ನು ಹೊತ್ತೊಯ್ದಿದೆ. ಚಿರತೆ ಮನೆಯ ಹತ್ತಿರವೇ ಮಲ ವಿಸರ್ಜನೆ ಮಾಡಿರುವುದು ಕಂಡು ಬಂದಿದೆ. ಈ ಘಟನೆಯಿಂದ ಮತ್ತಷ್ಟು ಎಚ್ಚೆತ್ತ ಅರಣ್ಯ ಇಲಾಖೆ ಚಿರತೆಯನ್ನು ಜೀವಂತವಾಗಿ ಹಿಡಿಯಲು ಪುಷ್ಪನಮನೆಯ ಅರಣ್ಯ ಪ್ರದೇಶದಲ್ಲಿ ಬೋನ್ ಇಟ್ಟಿರುವುದಾಗಿ ತಿಳಿದು ಬಂದಿದೆ.

RELATED ARTICLES  ಕಾಗಾಲದಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ: ಸ್ಥಳ ದಾನಿಗಳನ್ನು ಸ್ಮರಿಸಿದ ಶಾಸಕರು.