ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 66 ರ ಎಪಿಎಂಸಿ ಪೆಟ್ರೋಲ್ ಪಂಪ್ ಹತ್ತಿರ ಅಪಘಾತವೊಂದು ಸಂಭವಿಸಿದ್ದು ಅಪಘಾತದಲ್ಲಿ ಬೈಕ್ ಸವಾರನೋರ್ವ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ನಡೆದಿದೆ. ಹೆದ್ದಾರಿ ಮೇಲೆ ಸಾಗುತ್ತಿರಬೇಕಾದರೆ, ಹೆದ್ದಾರಿ ಅಂಚಿನಿಂದ ಕತ್ತಲ ಪ್ರದೇಶದಲ್ಲಿ ನಡೆದುಕೊಂಡು ಬರುತ್ತಿದ್ದ ವೃದ್ಧೆಯನ್ನು ಗಮನಿಸದೇ, ಅಚಾನಕ್ ಆಗಿ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

RELATED ARTICLES  ಹೊನ್ನಾವರಕ್ಕೆ ಆಗಮಿಸಿದ ಅನಂತ್ ಕುಮಾರ್ ಹೆಗಡೆ!

ಭಾವಿಕೇರಿ ಮೂಲದ , ಹಾಲಿ ಡೊಂಗ್ರಿಯಲ್ಲಿ ವಾಸವಾಗಿದ್ದ ಶೇಖರ ಗಣಪತಿ ನಾಯ್ಕ ಮೃತ ದುದೈವಿಯಾಗಿದ್ದಾನೆ. ವೃತ್ತಿಯಿಂದ ಚಾಲಕನಾಗಿರುವ ಈತ ಟಿಪ್ಪರ್ ಮತ್ತಿತರ ವಾಹನಗಳನ್ನು ಚಲಾಯಿಸಿ ಜೀವನ ನಡೆಸಿಕೊಂಡಿದ್ದು, ಡೊಂಗ್ರಿಯಿಂದ ಅಂಕೋಲಾಕ್ಕೆ ತನ್ನ ಬೈಕ್ ಮೇಲೆ ಬಂದು ಹೋಗುತ್ತಿದ್ದ ಎನ್ನಲಾಗಿದೆ.

ಆತ ಡಿಕ್ಕಿಯ ರಭಸಕ್ಕೆ ಶೆಡಗೇರಿ – ಹುಲಿದೇವರವಾಡಾ ನಿವಾಸಿ ಸಣ್ಣಮ್ಮ ಸುಕ್ರು ಗೌಡ ಅವರ ಕಾಲಿಗೆ ಗಂಭೀರವಾದ ಪೆಟ್ಟು ಬಿದ್ದು, ತಾಲೂಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ,ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರಕ್ಕೆ ಕಳುಹಿಸಲಾಗಿದೆ. ವಿಷಯ ತಿಳಿದ ಸಿಪಿಎ ಸಂತೋಷ್ ಶೆಟ್ಟಿ,ಪಿಎಸ್ಐ ಪ್ರೇಮನ ಗೌಡ ಪಾಟೀಲ ಆಗಮಿಸಿ ಸ್ಥಳ ಪರಿಶೀಲಿಸಿ,ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.

RELATED ARTICLES  ಅರ್ಥಪೂರ್ಣವಾಗಿ ಆಚರಿಸಿದ ಸಮಾಜಕಾರ್ಯ ತರಬೇತಿ ಶಿಬಿರ