ಕಾರವಾರ: ರಾಜ್ಯ ವಿಧಾನ ಪರಿಷತ್ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತಡೆಯಲು ಜಿಲ್ಲಾಡಳಿತ ಮುಂದಾಗಿದೆ. ಡಿಸಬರ್ 8 ರ ಸಂಜೆ 6 ಗಂಟೆಯಿಂದ ಮತದಾನದ ದಿನ ಡಿಸೆಂಬರ್ 10 ರ ಸಂಜೆ 6 ಗೆ ಯವರೆಗೆ ಮದ್ಯ ಮಾರಾಟ ಹಾಗೂ ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮುಲ್ಲೆಮುಗಿಲನ್ ಅವರು ಆದೇಶ ಹೊರಡಿಸಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಟ್ರಕ್.
ಜೋಯಿಡಾ: ತಾಲೂಕಿನ ಅನಮೋಡ ಘಟ್ಟದಲ್ಲಿ ಟ್ರಕ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕದಲ್ಲಿ ಬಿದ್ದ ಘಟನೆ ನಡೆದಿದೆ. ಟ್ರಕ್ ನಲ್ಲಿದ್ದ ಚಾಲಕ ವಾಹನದಲ್ಲಿಯೇ ಸಿಕ್ಕಿಹಾಕಿಕೊಂಡಿದ್ದ. ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಓರ್ವನಿಗೆ ಕಂದಕದಿAದ ವ್ಯಕ್ತಿಯ ನರಳಾಟ ಕೇಳಿ ಬಂದು, ಆತ ಅದನ್ನು ಕುಳೆ ಪೊಲೀಸ್ ಠಾಣೆಯಲ್ಲಿನ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಪೊಲೀಸರು ತಮ್ಮ ಪಿಸಿಆರ್ ವ್ಯಾನ್ ದಲ್ಲಿದ್ದ ಉಪ ನಿರೀಕ್ಷಕ ಪ್ರದೀಪ ಗವಸ, ಹವಾಲ್ದಾರ ಪ್ರಮೋದ ರಾಜು ಮಳಕರ, ಸಿಬ್ಬಂದಿಗಳಾದ ಶಂಕರ ನಾಯ್ಕ, ಆಶಿಷ್ ರಾಸಕರ ಮುಂತಾದವರು ಘಟನಾ ಸ್ಥಳಕ್ಕೆ ಹೋಗಿ ಪ್ರಜ್ಯೋತ ಫಡ್ತೆ ಮಾರ್ಗದರ್ಶನದಲ್ಲಿ ಸುಮಾರು 2 ರಿಂದ 3 ಗಂಟೆಗಳ ಕಠಿಣ ಪರಿಶ್ರಮ ಮಾಡಿ ಚಾಲಕನನ್ನು ರಕ್ಷಿಸಿದ್ದಾರೆ. ಚಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಗೋವಾದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.