ಶಿರಸಿ: ತಾಲೂಕಿನ ಹೀಪನಳ್ಳಿ ಸಂಕದ
ಮನೆಯ ಶ್ರೀಕಾಂತ ಹೆಗಡೆ ಅವರಿಗೆ ಸೇರಿದ
ಹಸು ಬಂಗಾರದ ಸರ ನುಂಗಿದ್ದು ಅದನ್ನು ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಹೊರತೆಗೆದ ಘಟನೆ ವರದಿಯಾಗಿದೆ. ಹೊಟ್ಟೆಯಲ್ಲಿ ಸುಮಾರು 15 ಗ್ರಾಂ. ತೂಕದ ಬಂಗಾರದ ಸರ ಸೇರಿಕೊಂಡಿತ್ತು.

ದೀಪಾವಳಿ ಹಬ್ಬದ ಪ್ರಯುಕ್ತ ಎಲ್ಲರಂತೆ ಗೋ ಪೂಜೆ ಮಾಡಿದ ಶ್ರೀಕಾಂತ ಹೆಗಡೆ ಕುಟುಂಬ ಮನೆ ಲಕ್ಷ್ಮೀಗೆ ಲಕ್ಷ್ಮೀ ಹಾರ ಹಾಕಿ ಪೂಜೆ ಮಾಡಿದ್ದರು. ಸಂಜೆ ವೇಳೆಗೆ ಬಂದು ನೋಡಿದರೆ ಹಾರ ಕಾಣುತ್ತಿಲ್ಲ. ಆತಂಕಕ್ಕೊಳಗಾದ ಕುಟುಂಬಸ್ಥರು ಸರ ಪತ್ತೆಗೆ ಮುಂದಾದರು. ಎಷ್ಟು ಹುಡುಕಿದರೂ ಸರ ಕಾಣುತ್ತಿಲ್ಲ. ಹಸುವೇ ಸರ ತಿಂದಿರಬಹುದೆಂದು ತಿಂಗಳುಗಳ
ಕಾಲ ಸಗಣಿಯಲ್ಲಿ ಸರ ಬರಬಹುದೆಂದು ಕಾದರು. ಆದರೂ ಸರ ಹೊರ ಬರದಿದ್ದಾಗ ವೈದ್ಯರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

RELATED ARTICLES  ಜಿಲ್ಲಾ ಪಂಚಾಯತಿಯ 2020- 21ನೇ ಸಾಲಿನ ಬಜೆಟ್ ಮಂಡನೆ

ಡಾ. ಪಿ.ಎಸ್ ಹೆಗಡೆ ತಪಾಸಣೆ ನಡೆಸಿದರೂ
ಸರ ಕಾಣಲಿಲ್ಲ. ಆದರೆ ಲೋಹ ಶೋಧದ
ಮೂಲಕ ತಪಾಸಣೆ ನಡೆಸಿದಾಗ ಆಕಳ
ಹೊಟ್ಟೆಯಲ್ಲಿ ಸರ ಇರುವುದು ಕಂಡುಬಂತು.
ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಸರವನ್ನು
ಹೊರ ತೆಗೆದಿದ್ದಾರೆ ಎನ್ನಲಾಗಿದೆ.

RELATED ARTICLES  ಭಟ್ಕಳದಲ್ಲಿ ಗರ್ಭಿಣಿ ಮಹಿಳೆಗೆ ಕರೋನಾ ಪಾಸಿಟೀವ್..! ಮತ್ತೆ ಏರಿದ ಸಂಖ್ಯೆ.