ಹೊನ್ನಾವರ : ದಿನಾಂಕ 10/12/2021 ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆ, ಕವಲಕ್ಕಿ ಯಲ್ಲಿ ಕೊವಿಡ್ ನಿಯಮ ಪಾಲಿಸಿ ವಿದ್ಯಾರ್ಥಿಗಳಿಂದ ತರಕಾರಿ ಹಾಗೂ ಹಣ್ಣಿನ ಮೇಳ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಅತಿ ಉತ್ಸುಕತೆಯಿಂದ ಮಾರಾಟ ಮಾಡಲು ಮತ್ತು ಖರೀದಿಸಲು ಮುಂದಾಗಿದ್ದರು.

RELATED ARTICLES  ಅಭಿವೃದ್ಧಿಯ ಹೊಸ ಕನಸು ಕಾಣುತ್ತಿದೆ ಕುಮಟಾ ಹೆಡ್ ಬಂದರ್.

ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಮನೆಯಲ್ಲೇ ಬೆಳೆಯಬಹುದಾದ ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ಬಳಸುವ ಬಗ್ಗೆ ಮಕ್ಕಳಲ್ಲಿ ಅರಿವನ್ನು ಮೂಡಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ಮಾರಾಟ ಮಾಡುವ ಮತ್ತು ಖರೀದಿಸುವ ಬಗ್ಗೆ ಮನವರಿಕೆ ಮಾಡಿಸಲು ಈ ಮೇಳವನ್ನು ಆಯೋಜಿಸಲಾಗಿತ್ತು. ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟ ನ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸಲು ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಹರ್ಷ ವ್ಯಕ್ತ ಪಡಿಸಿದರು. ಅಲ್ಲದೇ ಇನ್ನೂ ಅನೇಕ ಇಂತಹ ಪ್ರಾಯೋಗಿಕ ಕಾರ್ಯಕ್ರಮಗಳನ್ನು ನೆರವೇರಿಸುವಂತೆ ಶಿಕ್ಷಕರಿಗೆ ಕರೆಕೊಟ್ಟರು.

RELATED ARTICLES  ಬಾಲಕನಿಗೆ ಬೆದರಿಸಿರುವ ಘಟನೆಗೆ ಸಂಬಂಧಿಸಿ ಶಿರಸಿಯ ಮಾರಿಕಾಂಬಾ ದೇವಾಲಯದ ಆಡಳಿತ ಮಂಡಳಿಯಿಂದ ಅಂತೂ ಬಂತೂ ಸ್ಪಷ್ಟೀಕರಣ…!