ಕಾರವಾರ: ಇಂದು ವಿಧಾನ ಪರಿಷತ್’ನ 25 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ನಡೆದಿದೆ. ಬಿ.ಜೆ.ಪಿ.ಯಿಂದ ಗಣಪತಿ ಉಳ್ವೇಕರ್, ಕಾಂಗ್ರೆಸ್‍ನಿಂದ ಭೀಮಣ್ಣ ನಾಯ್ಕ, ರೈತ ಭಾರತ ಪಕ್ಷದಿಂದ ಸೋಮಶೇಖರ ಗೌಡ, ಪಕ್ಷೇತರರಾಗಿ ದತ್ತಾತ್ರೇಯ ನಾಯ್ಕ ಮತ್ತು ಈಶ್ವರ ಗೌಡ ಕಣದಲ್ಲಿದ್ದಾರೆ.

RELATED ARTICLES  ಸರಳ‌ ನೇರ ನಡೆ- ನುಡಿಗಳಿಂದಲೇ 'ಜನ ಮನ ಗೆದ್ದ ನಾಯಕ' ನ್ಯಾಯವಾದಿ ನಾಗರಾಜ ನಾಯಕ

ಜಿಲ್ಲೆಯಲ್ಲಿ ಒಟ್ಟು 227 ಗ್ರಾಮ ಪಂಚಾಯಿತಿಗಳು ಹಾಗೂ 11 ಸ್ಥಳೀಯ ಸಂಸ್ಥೆಗಳಿವೆ. ಇವುಗಳಿಂದ 2, 929 ಮತದಾರರಿದ್ದಾರೆ. ಶಾಸಕರು ಮತ್ತು ಸಂಸದರ ಹೆಸರನ್ನು ಎಲ್ಲ ನಗರ, ಸ್ಥಳೀಯ ಸಂಸ್ಥೆಗಳ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ’ ಎಂದು ತಿಳಿಸಿದರು. ಅವರು ಮತದಾನ ಮಾಡಲಿರುವ ಕೇಂದ್ರಗಳ ಉಸ್ತುವಾರಿ ಅಧಿಕಾರಿಗಳ ಅಭಿಪ್ರಾಯ ಪಡೆದು, ಬೇರೆ ಮತಗಟ್ಟೆಗಳಿಂದ ಹೆಸರನ್ನು ಅಳಿಸಲಾಗುತ್ತದೆ. ಹಾಗಾಗಿ ಅಂತಿಮವಾಗಿ 1,380 ಪುರುಷರು ಹಾಗೂ 1,534 ಮಹಿಳೆಯರು ಸೇರಿದಂತೆ 2,914 ಮತದಾರರಿದ್ದಾರೆ.

RELATED ARTICLES  ಎಮ್ಮೆ ಅಡ್ಡಬಂದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಅಪಘಾತ.

ಒಂಬತ್ತು ಅನಕ್ಷರಸ್ಥಮತದಾರರಿದ್ದು, ಅವರು ತಮಗೆ ಸಹಾಯಕರು ಬೇಕೆಂದು ಮನವಿ ಮಾಡಿದ್ದಾರೆ. ಅದನ್ನು ಪುರಸ್ಕರಿಸಲಾಗಿದೆ’ ಎಂದು ಮಾಹಿತಿ ನೀಡಿದರು.