ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿವಿಎಸ್‍ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿರಸಿಯಲ್ಲಿ ಇತ್ತೀಚೆಗೆ ಜಿಲ್ಲಾಮಟ್ಟದ ಭಗವದ್ಗೀತಾ ಅಭಿಯಾನದ ಪ್ರಯುಕ್ತ ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಕುಮಾರಿ ಭೂಮಿಕಾ ಎಸ್. ಭಟ್ಟ ಪ್ರಥಮ ಸ್ಥಾನ, ಕುಮಾರ ಚಂದನ ಹೆಗಡೆ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅದೇ ರೀತಿ, ಭಗವದ್ಗೀತಾ ಕಂಠಪಾಠದಲ್ಲಿ ಕುಮಾರ ಶ್ರೀನಿವಾಸ ವಿ. ಶಾನಭಾಗ ತೃತೀಯ ಸ್ಥಾನ ಪಡೆದು ಸಾಧನೆಗೈದಿದ್ದಾರೆ. ಪ್ರಾಥಮಿಕ ವಿಭಾಗದಿಂದ ಕುಮಾರಿ ಸ್ನೇಹಾ ಉದಯ ನಾಯಕ ಭಾಷಣದಲ್ಲಿ ತೃತೀಯ ಸ್ಥಾನ ಪಡೆದರೆ, ಕುಮಾರಿ ಅನನ್ಯ ಎಸ್. ಭಟ್ಟ ಕಂಠಪಾಠದಲ್ಲಿ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.

RELATED ARTICLES  ನಿತ್ರಾಣಗೊಂಡು ಬಿದ್ದಿದ್ದ ಬೃಹತ್ ಕಾಳಿಂಗ ಸರ್ಪ ರಕ್ಷಣೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯಾಧ್ಯಾಪಕರು, ಶಿಕ್ಷಕ ವೃಂದ ಅಭಿನಂದಿಸಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ. 

RELATED ARTICLES  ಸಂಸ್ಕೃತ ಭಾಷೆಯ ಶಬ್ದ ಭಂಡಾರವನ್ನು ಯಾವ ಭಾಷೆಯ ಶಬ್ದ ಭಂಡಾರವೂ  ಸರಿಗಟ್ಟಲು ಸಾಧ್ಯವಿಲ್ಲ : ಶಂಕರ ಭಟ್ಟ