ಸಿದ್ದಾಪುರ: ಮಾನಸಿಕ ಅಸ್ವಸ್ಥತತೆಯಿಂದ ಬಳಲುತ್ತಿದ್ದ ಮಹಿಳೆಯೋರ್ವಳು ಜೀವನದಲ್ಲಿ ಜಿಗುಪ್ಸೆಗೊಂಡು ತಾಲೂಕಿನ ಹೂಸುರು ಡ್ಯಾಮಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.ಗುರುವಾರ ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದವಳು ತಡರಾತ್ರಿಯಿಂದ ಶುಕ್ರವಾರ ಬೆಳಗ್ಗಿನ ಅವಧಿಯ ನಡುವೆ ಹತ್ತಿರದ ಡ್ಯಾಮಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿ ತಿಳಿಸಿದೆ.
ತಾಲೂಕಿನ ಹೂಸುರಿನ ಶಶಿಕಲಾ ನಾಯ್ಕ ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾಳೆ. ಎರಡು ವರ್ಷಗಳ ಹಿಂದೆ ಗಂಡನ ಮನೆಯ ಕೊಟ್ಟಿಗೆ ಸುಟ್ಟು ಹೋಗಿದ್ದು, ಜತೆಗೆ ಟೈಪಾರ್ಡ್ ಆಗಿ ಹೊಲದ ಕೆಲಸ ಬಾಕಿ ಉಳಿದಿರುವುದು ಹಾಗೂ ಗಂಡು ಮಕ್ಕಳು ಇಲ್ಲದಿರುವುದನ್ನು ಮನಸ್ಸಿಗೆ ಹಚ್ಚಿಕೊಂಡು ಮಾನಸಿಕವಾಗಿ ನೊಂದಿದ್ದಳು.
ಈಕೆಗೆ ಶಿವಮೊಗ್ಗದ ಶ್ರೀಧರ ನರ್ಸಿಂಗ್ ಹೋಮಲ್ಲಿ ಮಾನಸಿಕ ಚಿಕಿತ್ಸೆ ನೀಡಲಾಗಿತ್ತು. ಈ ಘಟನೆ ಕುರಿತು ಆಕೆಯ ಸಹೋದರ ಮಾಬ್ಲೇಶ್ವರ ನಾಯ್ಕ ವಾಟಗಾರ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.