ಕಾರವಾರ: ಉತ್ತರ ಕನ್ನಡದಲ್ಲಿ ಮಹಿಳೆಯರ ನಾಪತ್ತೆ ಪ್ರಕರಣ ಮತ್ತೆ ಮುಂದುವರೆದಿದೆ. ಒಂದಲ್ಲ ಒಂದು ತಾಲೂಕಿನಿಂದ ಮಹಿಳೆಯರು ಹಾಗೂ ಬಾಲಕಿಯರ ನಾಪತ್ತೆ ಪ್ರಕರಣಗಳು ವರದಿಯಾಗುತ್ತಲೇ ಇದೆ. ಅಂತಹುದೇ ಪ್ರಕರಣವೊಂದು ಮತ್ತೆ ಬೆಳಕಿಗೆ ಬಂದಿದೆ.
ತಾಲೂಕಿನ ಪ್ರೀತಿ ನಾಯಕ ಎನ್ನುವ ಮಹಿಳೆ ತನ್ನ ಒಂದು ವರ್ಷದ ಮಗನೊಂದಿಗೆ ಕಾಣೆಯಾಗಿದ್ದಾಳೆ. ಮನೆಯಲ್ಲಿ ಯಾರಿಗೂ ಹೇಳದೆ, ಕೇಳದೆ ಎಲ್ಲಿಯೋ ಹೋಗಿದ್ದು, ಈವರೆಗೆ ಮರಳಿ ಮನೆಗೆ ಬಂದಿಲ್ಲ. ಸಂಬoಧಿಕರ ಮನೆಗೂ ತೆರಳಿಲ್ಲ , ಅತ್ತ, ತವರು ಮನೆಗೂ ಹೋಗಿಲ್ಲ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಕೆ ಬಿಳಿ ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡನೆಯ ಮುಖ ಹೊಂದಿದ್ದು ಈಕೆ ಅಜಮಾಸು 23 ವಯಸ್ಸಿನವರು ಎನ್ನಲಾಗಿದೆ.
ವಿವಾಹಿತ ಮಹಿಳೆ ಮತ್ತು ಮಗು ಎಲ್ಲಿಯಾದರೂ ಕಂಡು ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.