ಕಾರವಾರ: ಜನ ಎಷ್ಟೇ ಬುದ್ಧಿವಂತರಾದರೂ ಆನ್ಲೈನ್ನಲ್ಲಿ ವಂಚನೆ ಪ್ರಕರಣಗಳು ಮತ್ತೆ ಮತ್ತೆ ಬೆಳಕಿಗೆ ಬರುತ್ತಿದೆ ಇದಕ್ಕೆ ಸಾಕ್ಷಿ ಎಂಬಂತೆ ಯಲ್ಲಾಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಾತೆದಾರರ ಅಕೌಂಟ್ ಹ್ಯಾಕ್ ಮಾಡಿ, 87 ಸಾವಿರ ರೂ. ಲಪಟಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೂಲತಃ ಕಾರವಾರ ತಾಲ್ಲೂಕಿನ ಕಡವಾಡ ಗ್ರಾಮದವರಾದ ಸದ್ಯ ಯಲ್ಲಾಪುರದಲ್ಲಿ ನೆಲೆಸಿರುವ ವಲಯ ಅರಣ್ಯಾಧಿಕಾರಿ ಎಮ್.ಜಿ.ನಾಯ್ಕ ಅವರು ಸೇಟ್ ಬ್ಯಾಂಕ್ ಆಫ್ ಇಂಡಿಯಾದ ಯಲ್ಲಾಪುರ ಶಾಖೆಯಲ್ಲಿ ಎಸ್.ಬಿ.ಐ ಅಕೌಂಟ್ ಹೊಂದಿದ್ದರು. ಅವರ ಅಕೌಂಟ್‌ನಲ್ಲಿ ಒಟ್ಟು ರೂಪಾಯಿ 87905.10 ಇತ್ತು,
ಖದೀಮರು ಡಿಸೆಂಬರ್ 6 ರಂದು ಸೋಮವಾರ ಸಂಜೆ 5.00 ಗಂಟೆಯಿಂದ 6.00 ಘಂಟೆಯೊಳಗೆ 25 ಸಾವಿರ, 20 ಸಾವಿರ, 25 ಸಾವಿರ, 5 ಸಾವಿರ, 12 ಸಾವಿರ ಹೀಗೆ ಐದು ಬಾರಿ ಹಣ ಡ್ರಾ ಮಾಡುವ ಮೂಲಕ 87 ಸಾವಿರ ರೂ. ಲಪಟಾಯಿಸಿದ್ದಾರೆ.
ನಂತರ ನಿವೃತ್ತ ಅಧಿಕಾರಿ ಎಮ್.ಜಿ.ನಾಯ್ಕ ಅವರ ಮೊಬೈಲ್‌ಗೆ ಹಣ ಡ್ರಾ ಮಾಡಿದ ಕುರಿತು ಮೆಸೇಜ್ ಬಂದಿದೆ. ನಂತರ ತೀವ್ರ ವಿಚಲಿತರಾದ ಇವರು ನೇರವಾಗಿ ಎಸ್.ಬಿ.ಐ.ನ ಕಸ್ಪಮ್‌ಕೇರ್ ನಂಬರಿಗೆ ಫೋನ್ ಮಾಡಿ ತಮ್ಮ ಅಕೌಂಟ್‌ನಿಂದ 87 ಸಾವಿರ ರೂ. ದೋಚಿದ ಕುರಿತು ದೂರು ಸಲ್ಲಿಸಿದ್ದಾರೆ. ಮರುದಿನ ಯಲ್ಲಾಪುರದ ಎಸ್.ಬಿ.ಐ ಬ್ಯಾಂಕ್‌ಗೆ ಹೋಗಿ ಪಾಸ್ ಬುಕ್ ಎಂಟ್ರಿ ಮಾಡಿ ಬ್ಯಾಂಕ್‌ನವರಿಗೆ ಮಾಹಿತಿ ನೀಡಿದ್ದಾರೆ. ನಂತರ ಕಾರವಾರದ ಕೈಮ್ ಬ್ರಾಂಚ್ ಪೋಲಿಸ್ ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.