ಹೊನ್ನಾವರ : ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಈ ವರ್ಷದ ನವರಾತ್ರಿ ಉತ್ಸವ
ಕೆಕ್ಕಾರಿನ ರಾಮಚಂದ್ರಾಪುರ ಮಠದ ಶಾಖಾ ಮಠವಾದ ರಘೋತ್ತಮ ಮಠದಲ್ಲಿ ನಡೆಯಲಿದೆ.
ಪೂಜ್ಯ ಶ್ರೀ ಸಂಸ್ಥಾನದವರು ದಿನಾಂಕ 19/9 ಮಂಗಳವಾರ 3.30 ಕ್ಕೆ ಆಗಮಿಸಲಿದ್ದು ಕತಗಾಲಿನಲ್ಲಿ ಅವರನ್ನು ಸ್ವಾಗತಿಸಿ ನಂತರ ಕಾರಿನ ಮೆರವಣಿಗೆಯಲ್ಲಿ ಕೆಕ್ಕಾರಿನ ವರೆಗೆ ಬರಮಾಡಿಕೊಳ್ಳಲಾಗುವುದು.
ನಡೆಯಲಿರುವ ವಿಶೇಷ ಕಾರ್ಯಕ್ರಮಗಳು.
20/9/2017 ಕ್ಕೆ ಭಿಕ್ಷಾ ಮತ್ತು ಪಾದಪೂಜೆ.
21-9 /2017ರಿಂದ 29/9/2017 ರವರೆಗೆ ನವರಾತ್ರಿ ಪೂಜೆ
ಪ್ರತಿದಿನದ ನಡೆಯಲಿದೆ.
ಸಮಯಸಾರಿಣಿ.
ಬೆಳಿಗ್ಗೆ 10 ಘಂಟೆಗೆ ರಾಮಪೂಜೆ.
3.30 ರಿಂದ 5 ರವರೆಗೆ ಪರಮಪೂಜ್ಯರಿಂದ ದೇವಿ ಪ್ರವಚನ.
5.30 ರಿಂದ ಕುಂಕುಮಾರ್ಚನೆ ಮತ್ತು ದೇವಿ ಅಪರಾಧ ಕ್ಷಮಾಪಣಾ ಸ್ತೋತ್ರ.
ಸೂರ್ಯಾಸ್ತಕ್ಕೆ ರಾಮಪೂಜೆ
ದೇವಿಗೆ ಉಡಿತುಂಬುವ ಸೇವೆ
ಬೆಳಿಗ್ಗೆ 11.00ರಿಂದ 1.00ಘಂಟೆ.
ಹಾಗೂ ಸಂಜೆ 5.30 ರಿಂದ ರಾತ್ರಿ 9ರ ವರೆಗೆ. ಹಾಗೂ
ಪ್ರತಿದಿನ ದೇವಿ ದೀಪ ಸೇವೆ ಸೂರ್ಯಾಸ್ತಕ್ಕೆ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳು.
ಬೆಳಿಗ್ಗೆ 8.30 ರಿಂದ-12
21/9 – ದುರ್ಗಾ ಪೂಜೆ.
22/9 – ದುರ್ಗಾ ದೀಪ ನಮಸ್ಕಾರ
23/9 -ಬಾಲಾ ತ್ರಿಪುರ ಸುಂದರಿ ಪೂಜೆ
24/9 -ವನದುರ್ಗಾ ಶಾಂತಿ
25 /9-ಸ್ವಯಂವರ ಪಾರ್ವತೀ ಪೂಜೆ
26/9 -ಲಕ್ಷ್ಮೀ ನಾರಾಯಣ ಹೃದಯ ಹವನ
27 /9- ಸರಸ್ವತಿ ಹವನ
28/9-ಲಲಿತಾ ಸಹಸ್ರನಾಮ ಹವನ
29 /9-ಚಂಡಿಕಾ ಹವನ
ನಡೆಯಲಿದೆ .ಈ ಎಲ್ಲಾ ಕಾರ್ಯಕ್ರಮಕ್ಕೆ ಎಲ್ಲಾ ಭಕ್ತರು ಹಾಗೂ ಸಾರ್ವಜನಿಕರು ಹಾಜರಿದ್ದು .ಶ್ರೀ ದೇವರ ಹಾಗೂ ಶ್ರೀ ಗುರುಗಳ ಆಶೀರ್ವಾದ ಪಡೆಯಬಹುದೆಂದು ವ್ಯವಸ್ಥಾಪನಾ ಮಂಡಳಿಯವರು ತಿಳಿಸಿದ್ದಾರೆ.