ಕುಮಟಾ : ಹೊಳೆಗದ್ದೆ ಐ.ಆರ್.ಬಿ. ಟೋಲ್ ಗೇಟ್ ನಲ್ಲಿ ಕುಮಟಾ ಹಾಲಕ್ಕಿ ಒಕ್ಕಲಿಗರ ಸಂಘ ಶ್ರೀಮತಿ ತುಳಸಿ ಗೌಡ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿ ಹಿಂದಿರುಗುವಾಗ ಟೋಲ್ ಗೇಟ್ ನಲ್ಲಿ ಗೌರವಿಸುವ ಸಂದರ್ಭದಲ್ಲಿ ತುಳಸಿ ಗೌಡ ಹೆಸರಿನಲ್ಲಿ ಒಂದು ತುಳಸಿವನ ನಿರ್ಮಿಸುವಂತೆ ಮನವಿ ಮಾಡಿಕೊಂಡಿದ್ದಕ್ಕೆ ಸ್ಪಂದಿಸಿದ ಅಧಿಕಾರಿಗಳು ಕುಮಟಾದಿಂದ ಹೊನ್ನಾವರಕ್ಕೆ ಹೋಗುವಾಗ ಟೋಲ್ ಗೇಟ್ ನ ಎಡಭಾಗದಲ್ಲಿ ತುಳಸಿವನ ನಿರ್ಮಾಣ ಮಾಡಿ ಪದ್ಮಶ್ರೀ ತುಳಸಿ ಗೌಡ ಅವರಿಂದಲೇ ಉದ್ಘಾಟನೆ ನೆರವೇರಿಸಿತು. ಈ ಸಂದರ್ಭದಲ್ಲಿ ದೇವಗಿರಿ
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರತ್ನಾ ಸುರೇಶ್ ಹರಿಕಾಂತ ಸದಸ್ಯರಾದ ಎಸ್.ಟಿ.ನಾಯ್ಕ, ದೇವೇಂದ್ರ ಶೇರುಗಾರ್, ಪಾಂಡು ಪಟಗಾರ ಹೊನ್ನಾವರ ಪಟ್ಟಣ ಪಂಚಾಯತ್ ಸದಸ್ಯರಾದ ಸುಬ್ರಾಯ ಗೌಡ. ಐ.ಆರ್.ಬಿ. ಜನರಲ್ ಮ್ಯಾನೇಜರ್ ನಿತೀನ್ ಗಡೀಕರ ಯೋಜನಾಧಿಕಾರಿ ನಿಲೇಶ ಗೋಪಿ, ಸಾವಲ್ಕರ್, ಉದ್ಯಮಿ ಬಾಳಾ ಬಾಳೇರಿ, ಶ್ರೀಧರ್ ಗೌಡ, ಜಂಗ ಗೌಡ, ಈಶ್ವರಗೌಡ, ಸೇರಿದಂತೆ ವಲಯ ಅರಣ್ಯಾಧಿಕಾರಿ ಪ್ರವೀಣ್ ನಾಯಕ್, ಹೊನ್ನಾವರ ಸಿಪಿಐ ಶ್ರೀಧರ್, ಹಾಲಕ್ಕಿ ಒಕ್ಕಲಿಗರ ಸಂಘದ ಕಾರ್ಯದರ್ಶಿ ಶ್ರೀಧರ ಗೌಡ, ಸದಸ್ಯರಾದ ಜಂಗಾ ಗೌಡ, ಈಶ್ವರ ಗೌಡ ಪ್ರಮುಖ ರಾದ ಸುಬ್ಬು ಉಡದಂಗಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಘದ ಮನವಿಗೆ ಸ್ಪಂದಿಸಿ ತುಳಸಿವನ ನಿರ್ಮಿಸಿದ್ದಕ್ಕೆ ಐ.ಆರ್.ಬಿ.ಯವರಿಗೆ ಕುಮಟಾ-ಹೊನ್ನಾವರ ಹಾಲಕ್ಕಿ ಒಕ್ಕಲಿಗರ ಸಂಘವು ಧನ್ಯವಾದ ಅರ್ಪಿಸಿತು.