ಯಲ್ಲಾಪುರ : ಒಂದಿಲ್ಲೊಂದು ರೀತಿಯಲ್ಲಿ ಜನರನ್ನು ಎಗರಿಸಿ ಚಿನ್ನಾಭರಣಗಳನ್ನು ಕದ್ದೊಯ್ಯುವ ಜನರು ಇದ್ದಾರೆ. ಹೊಸ ರೀತಿಯಲ್ಲಿ ವರಸೆ ತೋರಿ ಅಂಗನವಾಡಿ ಕಾರ್ಯಕರ್ತೆಗೆ ಬಂಗಾರದ ಆಭರಣ ತೊಳೆದುಕೊಡುವುದಾಗಿ ನಂಬಿಸಿದ ಅಪರಿಚಿತರು 35-40ಗ್ರಾಂ ತೂಕದ ಮಂಗಳ ಸೂತ್ರ ಕದ್ದು ಪರಾರಿಯಾದ ಘಟನೆ ಪಟ್ಟಣದ ಹೊಸ ಓಣೆಯ ಬಸವೇಶ್ವರ ನಗರದ ಅಂಗನವಾಡಿಯಲ್ಲಿ ನಡೆದಿದೆ.

ಅಂಗನವಾಡಿಗೆಗೆ ಬಂದ ಅಪರಿಚಿತ ವ್ಯಕ್ತಿಗಳು ಅಂಗನವಾಡಿ ಕಾರ್ಯಕರ್ತೆ ಶಾಂತಾ ಬುದ್ದಿಯವರ ಬಳಿ ತಾಳಿಯನ್ನು ತೊಳೆದುಕೊಡುವುದಾಗಿ ಹೇಳಿದ್ದಾರೆ. ಇದನ್ನು ನಂಬಿದ ಅವರು, ಬೆಳ್ಳಿಯ ಚೈನ್ ಮೊದಲು ತೊಳೆದು ಕೊಡುವಂತೆ ಹೇಳಿದ್ದಾರೆ. ಅದರಂತೆ ಅಪರಿಚಿತರು ತೊಳೆದುಕೊಟ್ಟಿದ್ದಾರೆ. ನಂತರ ಅವರ ಕೈಗೆ ಅಪರಿಚಿತ ವ್ಯಕ್ತಿಗಳು ಯಾವುದೋ ಬೂದಿ ರೂಪದ ಪುಡಿಯನ್ನು ಕೊಟ್ಟಿದ್ದಾರೆ. ನಂತರ ಅಲ್ಲಿದ್ದ ಕುಕ್ಕರಲ್ಲಿ ಆಭರಣ ಹಾಕುವಂತೆ ಅದರ ಜೊತೆಗೆ ಪುಡಿಯನ್ನು ಹಾಕಿ
ತೊಳೆಯುವುದಾಗಿ ಹೇಳಿದ್ದಾರೆ.

RELATED ARTICLES  ಮಕ್ಕಳಲ್ಲಿನ ಸುಪ್ತ ಪ್ರತಿಭೆಗಳು ಅನಾವರಣಗೊಳ್ಳಲಿ: ಜಗನ್ನಾಥ ನಾಯ್ಕ.

ಯಾರಿಗೂ ತಿಳಿಯದಂತೆ ಮಾಂಗಲ್ಯದ ಸರವನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡ ಅಪರಿಚಿತರು, ಕುಕ್ಕರಿನಲ್ಲಿ ಪುಡಿ ಮತ್ತು ನೀರು ಹಾಕಿ ಕುದಿಸಿ ಸ್ವಲ್ಪ ಹೊತ್ತಿನ ಬಳಿಕ ತೆಗೆಯುವಂತೆ ಸೂಚಿಸಿ ಅಲ್ಲಿಂದ ಕಾಲು ಕಿತ್ತಿದ್ದಾರೆ. ಕೆಲ ಸಮಯದ ನಂತರ ಅಂಗನವಾಡಿ ಕಾರ್ಯಕರ್ತೆಯು ಕುಕ್ಕರ್‌ ತೆಗೆದು ನೋಡಿದಾಗ ಬಂಗಾರದ ಆಭರಣಗಳು ಇಲ್ಲದಿರುವುದು ಕಂಡು ಗಲಿಬಿಲಿಗೊಂಡು ಕಾರ್ಯಕರ್ತೆ ಹಾಗೂ ಸಹಾಯಕಿಯು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮಾಹಿತಿ ಪಡೆದಿದ್ದಾರೆ.

RELATED ARTICLES  ಜಿಲ್ಲೆಯಲ್ಲಿ 136 ವಿದ್ಯಾರ್ಥಿಗಳು, 15 ಶಿಕ್ಷಕರಿಗೆ ಕೊರೋನಾ ಸೋಂಕು.