ಕುಮಟಾ : ಆಧುನಿಕತೆಯ ಇಂದಿನ ವೇಗದ ಬದುಕಿನಲ್ಲಿ ಆರೋಗ್ಯ ಸುಸ್ಥಿತಿಯಲ್ಲಿಟ್ಟುಳ್ಳುವುದು ಒಂದು ಸವಾಲಾಗಿದೆ. ಯಾರ ಆರೋಗ್ಯ ಯಾವಾಗ ಏರುಪೇರಾಗುತ್ತದೆ ಎನ್ನುವುದು ಯಾರಿಂದಲೂ ಊಹಿಸಲಾಗದು. ಇಂಥ ಸ್ಥಿತಿಯಲ್ಲಿ ಗ್ರಾಮೀಣ ಮಟ್ಟದಲ್ಲಿ ಸೇವಾ ಸಂಸ್ಥೆಗಳು ನಡೆಸುವ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಳ್ಳಲು ಜನರು ಸದಾ ಮುಂದೆ ಬರಬೇಕು’ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಬೆಂಗಳೂರಿನ ಕ್ಯಾನರಿಸ್ ಫೌಂಡೇಶನ್, ಕುಮಟಾದ `ಐಕ್ಯ’ ಸರ್ಕಾರೇತರ ಸಂಸ್ಥೆ ಹಾಗೂ ಆರೋಗ್ಯ ಇಲಾಖೆ ಭಾನುವಾರ ಹೊಲಗದ್ದೆಯ ಕ್ಯಾನರಿಸ್ ಆಕ್ವಾ ಕಲ್ಚರ್ ಸಂಸ್ಥೆಯ ಆವರಣದಲ್ಲಿ ದಿವಂಗತ ಶಿಕ್ಷಕ ದಂಪತಿ ಎಸ್.ಎನ್. ಹರಿಕಂತ್ರ ಸ್ಮರಣಾರ್ಥ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಉದ್ಯಮಿ ಎಚ್.ಎಸ್. ಗಜಾನನ ಅವರು `ಐಕ್ಯ’ ಸಂಸ್ಥೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ತಮ್ಮ ಊರಿನಲ್ಲಿ ಉಚಿತ ಆರೋಗ್ಯ ಶಿಬಿರ ನಡೆಸಿ ಅಗತ್ಯ ಔಷಧಿಗಳನ್ನು ಉಚಿತವಾಗಿ ನೀಡುತ್ತಿರುವುದು ಉತ್ತಮ ಕಾರ್ಯ’ ಎಂದರು. ಸರ್ಕಾರಿ ಆಸ್ಪತ್ರೆಯ ಹೃದಯ ತಜ್ಞ ಡಾ. ಶ್ರೀನಿವಾಸ ನಾಯಕ, ` ಮನುಷ್ಯನ ಆರೋಗ್ಯ ಚೆನ್ನಾಗಿರಬೇಕಾದರೆ ಆತ ಒಳ ಒತ್ತಡದಿಂದ ದೂರವಿರಬೇಕು. ಆತನ ಆಲೋಚನೆಗಳು ಆರೋಗ್ಯಕರವಾಗಿರಬೇಕು. ನಮ್ಮೊಂದಿಗೆ ಗಿಡ, ಮರ, ಪ್ರಾಣಿ ಪಕ್ಷಿಗಳಿಗೂ ಬದುಕಲು ಅವಕಾಶ ನೀಡಿ ಹೊರ ಜಗತ್ತು ಪರಿಶುದ್ಧವಾಗಿರುವಂತೆ ನಾವು ನೋಡಿಕೊಂಡರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ’ ಎಂದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ವಕೀಲ ಆರ್.ಜಿ. ನಾಯ್ಕ, ` ಅರಣ್ಯ ಇಲಾಖೆ ಅಕೇಶಿಯಾದಂಥ ಏಕ ಜಾತಿ ಸಸ್ಯ ಬದಲು ನೈಸರ್ಗಿಕ ಜಾತಿಯ ಗಡಿ ಮರಗಳನ್ನು ಬೆಳೆಸುವ ಆಂದೋಲನ ಕೈಕೊಂಡರೆ ಉತ್ತಮ ಭೌಗೋಳಿಕ ಪರಿಸರ ನಿರ್ಮಾಣ ಸಾಧ್ಯ. ಕ್ಯಾನರಿಸ್ ಫೌಂಡೇಶನ್, `ಐಕ್ಯ’ ಸರ್ಕಾರೇತರ ಸಂಸ್ಥೆ ಹಾಗೂ ಆರೋಗ್ಯ ಇಲಾಖೆ ಗ್ರಾಮೀಣ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವುದು ಮಾದರಿ ಕೆಲಸ’ ಎಂದರು. ಕ್ಯಾನರಿಸ್ ಫೌಂಡೇಶನ್ ಅಧ್ಯಕ್ಷ ಎಚ್.ಎಸ್. ಗಜಾನನ ಸ್ವಾಗತಿಸಿದರು. `ಐಕ್ಯ’ ಸರ್ಕಾರೇತರ ಸಂಸ್ಥೆ ಅಧ್ಯಕ್ಷ ಎಂ.ಜಿ. ನಾಯ್ಕ ನಿರೂಪಿಸಿದರು. ಹೊಲನಗದ್ದೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶುಭಲಕ್ಷಿö್ಮÃ ಹಳಕಾರ, ಬಾಡ ಗ್ರಾಮ ಪಂಚಾಯ್ತಿ ಅಧ್ಯಕ್ಷ ದಾವುದ್ ಬಿಬ್ಕಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ಕಾಗಾಲ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಸತೀಶ ಭಟ್ಟ, ಡಾ. ಗಜಾನನ ಭಾಗ್ವತ, ನಿವೃತ್ತ ಡಿ.ಎಫ್.ಒ ಆರ್.ಎಸ್. ಅಂದಲಮನೆ, ಸ್ಥಳೀಯರಾದ ಜಗನ್ನಾಥ ನಾಯ್ಕ, ಸದಾನಂದ ಹರಿಕಂತ್ರ, ವಿವೇಕ ಹೆಗಡೆ, ಅರುಣ ಗುನಗಾ, ಎಸ್.ಎನ್. ಭಟ್ಟ, ಆರ್.ಎಸ್. ಭಟ್ಟ, ಅನು ಭಟ್ಟ, ರಾಘವೇಂದ್ರ ಪಟಗಾರ, ಉತ್ತರ ಕನ್ನಡ ಬ್ಲಡ್ ಬ್ಯಾಂಕ್ ಅಧಿಕಾರಿಗಳು ಪಾಲ್ಗೊಂಡಿದ್ದರು. ನೂರಕ್ಕು ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ಮಾಡಿ ಉಚಿತ ಔಷಧಿ ನೀಡಲಾಯಿತು. ೧೫ ಜನರು ರಕ್ತದಾನ ಗೈದರು.
ಬೆಂಗಳೂರಿನ ಕ್ಯಾನರಿಸ್ ಫೌಂಡೇಶನ್, ಕುಮಟಾದ `ಐಕ್ಯ’ ಸರ್ಕಾರೇತರ ಸಂಸ್ಥೆ ಹಾಗೂ ಆರೋಗ್ಯ ಇಲಾಖೆ ಭಾನುವಾರ ಹೊಲಗದ್ದೆಯಲ್ಲಿ ದಿವಂಗತ ಶಿಕ್ಷಕ ದಂಪತಿ ಎಸ್.ಎನ್. ಹರಿಕಂತ್ರ ಸ್ಮರಣಾರ್ಥ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಶಾಸಕ ದಿನಕರ ಶೆಟ್ಟಿ ಅವರು ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡರು.