ಯಲ್ಲಾಪುರ : ಬೈಕ್ ಚಲಾಯಿಸುವಾಗ ಅದೆಷ್ಟೇ ಜಾಗರೂಕರಾಗಿದ್ದರೂ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ರಸ್ತೆ ನಿಯಮಗಳನ್ನು ಇರುವುದರಿಂದ ಅಪಘಾತಗಳು ಸಂಭವಿಸಿದರೆ ಇನ್ನೂ ಅನೇಕ ಸಂದರ್ಭಗಳಲ್ಲಿ ಅಚಾನಕ್ ಆಗಿ ಘಟನೆಗಳು ನಡೆದುಬಿಡುತ್ತವೆ. ಅದಕ್ಕೆ ಸಾಕ್ಷ್ಯ ಎನ್ನುವಂತೆ ತಾಲೂಕಿನ ವಡಗಟ್ಟಾ-ಹುನಗುಂದ ರಸ್ತೆಯಲ್ಲಿ ಬೈಕ್‌ಗೆ ಕಾಡು
ಹಂದಿ ಅಡ್ಡ ಬಂದ ಪರಿಣಾಮ ಬೈಕ್ ಬಿದ್ದು ಸವಾರನಿಗೆ ಗಾಯವಾದ ಘಟನೆ ಇಂದು ನಡೆದಿದೆ. ಅಪಘಾತದಿಂದಾಗಿ ವ್ಯಕ್ತಿಯ ತುಟಿ ಹಾಗೂ ಕಣ್ಣಿನ ಭಾಗ ಹಾಗೂ ಹಣೆಯ ಭಾಗಕ್ಕೆ ಮತ್ತು ಕೈಗೆ ಪೆಟ್ಟು ಬಿದ್ದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ
ಬೈಕ್ ಚಲಾಯಿಸುತ್ತಿದ್ದ ವೇಳೆ ಕಾಡು ಹಂದಿಯೊಂದು ವೇಗವಾಗಿ ಬಂದ ಪರಿಣಾಮ ಸವಾರರಿಂದ ಬಿದ್ದು ತೀವ್ರತರಹದ ಗಾಯಗಳಾಗಿದೆ. ಪ್ರಸಾದ್ ಕುಂಜು (51) ಎಂಬುವವರೇ ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಬೈಕ್‌ನಿಂದ ಬಿದ್ದು ಗಾಯಗೊಂಡ ವ್ಯಕ್ತಿಯನ್ನು ಗ್ರಾಮಸ್ಥರು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗಿದೆ.