ಹೊನ್ನಾವರ : ಎಲ್ಲಾ ಪಕ್ಷಲ್ಲಿರುವ ಮನುಷ್ಯರು ಉಪ್ಪು, ಹುಳಿ, ಖಾರ ತಿನ್ನುವವರೇ. ರಾಜಕೀಯಕ್ಕೆ ಬಂದಾಗ ಎಲ್ಲವನ್ನೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ತಪ್ಪು ಯಾರೇ ಮಾಡಿದರೂ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗುವುದು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದ್ದಾರೆ. ಹೊನ್ನಾವರ ಪಟ್ಟಣದಲ್ಲಿ ನಡೆಯುತ್ತಿರುವ ಕಾಮಗಾರಿ ಪರಿಶೀಲನೆಗೆ ಬಂದಿದ್ದ ಅವರು, ಬಿಜೆಪಿ ನಗರಾಧ್ಯಕ್ಷನ ಮೇಲಿನ ಆರೋಪದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಮನುಷ್ಯ ಎಂದ ಮೇಲೆ ಎಲ್ಲ ವಿಷಯಗಳಲ್ಲಿ ಆಸಕ್ತಿ ಇರುತ್ತದೆ. ಅದು ಅವರ ವೈಯಕ್ತಿಕ ವಿಚಾರ. ರಾಜಕೀಯಕ್ಕೆ ಬಂದ ಮೇಲೆ ಇವೆಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಅಂಥವರಿಗೆ ನಮ್ಮ ಪಕ್ಷದಲ್ಲಿ ಜಾಗವಿಲ್ಲ. ಅವರನ್ನು ಪಕ್ಷದಿಂದ ಉಚ್ಚಾಟನೆಗೆ ತಿಳಿಸಲಾಗುವುದು ಎಂದರು.
ಪಕ್ಷದ ಮುಖಂಡರು ಆರೋಪಿತನನ್ನು ಬಜಾವ್ ಮಾಡಲು ಬೇರೆಡೆ ಶಿಫ್ಟ್ ಮಾಡಿರುವ ಬಗ್ಗೆ ಮಾಹಿತಿ ಇದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಇಂತಹ ವಿಷಯಗಳು ಬಂದಾಗ ಸಹಾಯ ಮಾಡಿದರೂ ಮಾತನಾಡುತ್ತಾರೆ. ಸಹಾಯ ಮಾಡದಿದ್ದರೂ ಮಾತನಾಡುತ್ತಾರೆ. ಆದರೆ ಈ ವಿಷಯ ತಮ್ಮ ಗಮನಕ್ಕೆ ಬಂದಾಗ ಇದರಲ್ಲಿ ಹಸ್ತಕ್ಷೇಪ ಮಾಡಿಲ್ಲ. ಮುಂದೆ ಸಹಾಯ ಮಾಡುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.