ಕುಮಟಾ: ವೃದ್ಧಾಶ್ರಮದಲ್ಲಿ ಹಾಗೂ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ಮತ್ತು ಆರ್ಥಿಕ ಸಹಾಯ ಮಾಡುವ ಮೂಲಕ ಸಿವಿಲ್ ಗುತ್ತಿಗೆದಾರ ರಾಮನಾಥ ಶಾನಭಾಗ (ಧೀರೂ) ಅವರು ತಮ್ಮ 60ನೇ ವರ್ಷದ ಜನ್ಮ ದಿನವನ್ನು ಆಚರಿಸಿಕೊಂಡರು.
ಕುಮಟಾ ಪಟ್ಟಣದ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ಜಾನಕಿರಾಮ ವೃದ್ದಾಶ್ರಮ ಹಾಗೂ ಹೆರವಟ್ಟಾದ ಶ್ರೀನಿವಾಸ ಚಾರಿಟೆಬಲ್ ಟ್ರಸ್ಟ್ ವೃದ್ಧಾಶ್ರಮಕ್ಕೆ ತೆರಳಿದ ರಾಮನಾಥ ಶಾನಭಾಗ, ಅವರ ಕುಟುಂಬಸ್ಥರು ಹಾಗೂ ಹಿತೈಷಿಗಳು ಹಣ್ಣು-ಹಂಪಲು ವಿತರಿಸಿ, ವೃದ್ಧಾಶ್ರಮಕ್ಕೆ ತಲಾ 25 ಸಾವಿರ ರೂ. ಚೆಕ್ ವಿತರಿಸಿದರು.
ಶ್ರೀನಿವಾಸ ಚಾರಿಟೆಬಲ್ ಟ್ರಸ್ಟ್‌ನ ಮೀರಾ ಶಾನಭಾಗ ಮಾತನಾಡಿ, ರಾಮನಾಥ ಶಾನಭಾಗ ಅವರ ಸಮಾಜ ಸೇವೆ ನಿರಂತರವಾಗಿ ಮುಂದುವರೆಯಬೇಕು. ಅವರಿಂದ ಈ ಸಮಾಜ ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಸಾಗಬೇಕಾಗಿದೆ ಎಂದರು. ರಾಮನಾಥ ಶಾನಭಾಗ ಅವರ ಪತ್ನಿ ದಿವ್ಯಾ ಶಾನಭಾಗ, ಸಹೋದರ ಮೋಹನ ಶಾನಭಾಗ, ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಗಣೇಶ ನಾಯ್ಕ, ಹಿತೈಶಿಗಳಾದ ಪವನ ಪಭು, ಶ್ರೀಧರ ಗೌಡ, ರಾಮ ನಾಯ್ಕ, ಗೋವಿಂದ ಪಟಗಾರ, ಅಜಿತ್ ಕಡೇಗೊಡಿ, ಪ್ರಮೋದ ಪ್ರಭು, ಗ್ರಾಪಂ ಸದಸ್ಯ ಮಂಜು ಗೌಡ ಸೇರಿದಂತೆ ಮತ್ತಿತರರು ಇದ್ದರು.