ಶಿರಸಿ: ಕೊರೋನಾ ನಂತರದಲ್ಲಿ ವಿದ್ಯಾರ್ಥಿಗಳಲ್ಲಿ ಮೊಬೈಲ್ ಗೀಳು ಹೆಚ್ಚುತ್ತಿದ್ದು ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಶಾಲಾ ಆಡಳಿತ ಮಂಡಳಿ ಮುಂದಾಗುತ್ತಿದೆ. ಶಾಲೆಗಳಿಗೆ ಮೊಬೈಲ್ ನಿಷೇಧಿಸಿ ಅದೇಷ್ಟೇ ಕಟ್ಟುನಿಟ್ಟಿನ ಆದೇಶ ಹೊರಡಿಸುತ್ತಿದ್ದರೂ ಅದು ಏನು ಪ್ರಯೋಜನಕ್ಕೆ ಬಾರದ ರೀತಿಯಲ್ಲಿ ಮಕ್ಕಳು ತಮ್ಮ ವರ್ತನೆಯನ್ನು ಮುಂದುವರಿಸುತ್ತಿರುವುದು ಆಗಾಗ ವಿವಿಧ ಪ್ರಕಾರದ ಮೂಲಕ ಬೆಳಕಿಗೆ ಬರುತ್ತಿದೆ. ಕ್ಲಾಸಿನೊಳಗೆ ಮೊಬೈಲ್ ತರುವಂತಿಲ್ಲ ಎಂದು ಪದೇ ಪದೇ ಎಚ್ಚರಿಸುತ್ತಿದ್ದರೂ ಎಚ್ಚೆತ್ತುಕೊಳ್ಳದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಬಿಸಿಮುಟ್ಟಿಸಿದ ಘಟನೆ ವರದಿಯಾಗಿದೆ.

RELATED ARTICLES  ಯಶಸ್ವಿಯಾಗಿ ನಡೆದ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್‍ನ ವಾರ್ಷಿಕ ಕ್ರೀಡಾಕೂಟ

ಇಲ್ಲಿನ ನಿಲೇಕಣಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕ್ಲಾಸಿನಲ್ಲಿಯೂ ಮೊಬೈಲ್ ಬಳಕೆ ಮಾಡುತ್ತಿದ್ದರು ಎನ್ನಲಾಗಿದ್ದು, ಪ್ರಾಂಶುಪಾಲರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದು, ಈ ವೇಳೆ 400ಕ್ಕೂ ಹೆಚ್ಚು ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ರಿಂಗಾಗಿದ್ದು, ಹೀಗಾಗಿ ಪ್ರಾಂಶುಪಾಲರು, ಉಪನ್ಯಾಸಕರು ದಿಢೀರ್ ಭೇಟಿ ಪರಿಶೀಲನೆ ನಡೆದ ವೇಳೆ 400ಕ್ಕೂ ಹೆಚ್ಚು ಮೊಬೈಲ್ ಸಿಕ್ಕಿದೆ. ಬರೀ ಮೊಬೈಲ್ ಮಾತ್ರವಲ್ಲದೆ. ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಸಿಗರೇಟ್ ಪ್ಯಾಕೇಟ್, ಲೈಟರ್ ಸಹ ಪತ್ತೆಯಾಗಿದೆ ಎನ್ನಲಾಗಿದೆ. ಕಾಲೇಜಿನ ಕಟ್ಟುನಿಟ್ಟಿನ ಕ್ರಮದ ಸುದ್ದಿ ತಿಳಿದು ನಗರಠಾಣೆ ಪೊಲೀಸರು ಕಾಲೇಜಿಗೆ ಆಗಮಿಸಿದ್ದು, ಕಾಲೇಜು ಪ್ರಾಚಾರ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES  ಹಳ್ಳ ಹಿಡಿದ ಗಟಾರ್ ಕಾಮಗಾರಿ: ಸಾರ್ವಜನಿಕರ ಆಕ್ರೋಶ