ಕಾರವಾರ: ಕೊರೋನಾ ಮೂರನೇ ಅಲೆಯ ಭಯ ಹಾಗೂ ಓಮಿಕ್ರಾನ್ ಟೆಂಕ್ಷನ್ ನಡುವೆ ಸಿದ್ದಾಪುರದ ಶಾಲೆ- ಕಾಲೇಜುಗಳಲ್ಲಿ ಮೂರು- ನಾಲ್ಕು ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದ್ದನ್ನು ಹೊರತುಪಡಿಸಿ ಕ್ಲಸ್ಟರ್ಸ್ ಮಾಡುವಷ್ಟು ಸೋಂಕಿತರು ಪತ್ತೆಯಾಗಿರಲಿಲ್ಲ. ಉತ್ತರಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಕ್ಲಸ್ಟರ್ಸ್ ಆಗಿರಲಿಲ್ಲ ಇದೀಗ ಜೊಯಿಡಾ ರಾಮನಗರದ ವಸತಿ ಶಾಲೆಯೊಂದರಲ್ಲಿ ಸುಮಾರು 17 ವಿದ್ಯಾರ್ಥಿನಿಯರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಪ್ರಯೋಗಾಲಯದಿಂದ ಮಾಹಿತಿ ಬಂದಿರುವ ಕಾರಣ ಆ ಶಾಲೆಯನ್ನು ಕೋವಿಡ್ ಕ್ಲಸ್ಟರನ್ನಾಗಿ ಪರಿವರ್ತಿಸಲಾಗಿದೆ ಎಂದು ಉತ್ತರಕನ್ನಡ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೀಗಾಗಿ ಶಾಲೆಯ ಸುಮಾರು 60 ವಿದ್ಯಾರ್ಥಿಗಳ ಗಂಟಲು ದ್ರವ ಪಡೆದು ತಪಾಸಣೆಗೆ ಕಳುಹಿಸಲಾಗಿತ್ತು. ಇದರಲ್ಲಿ ಸುಮಾರು 15-17 ಮಂದಿಗೆ ಸೋಂಕು ದೃಢಪಟ್ಟಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಬಂದಿದೆ ಎಂದು ತಿಳಿಸಿದರು. ಮತ್ತೊಂದು ಬ್ಲಾಕ್ ನಲ್ಲಿ ಉಳಿದ ವಿದ್ಯಾರ್ಥಿಗಳನ್ನು ಐಸೋಲೇಟ್ ಮಾಡಿ, ಮೂರು ದಿನಗಳವರೆಗೆ ನಿಗಾದಲ್ಲಿಟ್ಟು, ನಂತರ ಮುಂದಿನ ಕ್ರಮ ಕೈಗೊಳ್ಳಲು ತಂಡವನ್ನು ಕಳುಹಿಸಿದ್ದೇವೆ.ಇನ್ನೂ ಅಧಿಕೃತ ಫಲಿತಾಂಶ ಬಂದಿಲ್ಲವಾದರೂ, ಶಾಲೆಯನ್ನು ಕಂಟೋನೈಂಟ್ ಝೂನ್ ಎಂದುಘೋಷಿಸಿ, ಈಗ ಕ್ಲಸ್ಟರ್ ಆಗಿ ಪರಿವರ್ತಿಸಲಾಗಿದೆ. ಅಲ್ಲದೇ ವಿದ್ಯಾರ್ಥಿಗಳ ಮಾದರಿಯನ್ನೂ ಜಿನೋಮ್ ಪರೀಕ್ಷೆಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಅಲ್ಲದೆ, ಇದೇ ವೇಳೆ ಜಿಲ್ಲೆಯಲ್ಲಿ ಒಮಿಕ್ರಾನ್ ಡಿಎನ್‌ಎ ಸೀಕ್ವೆನ್ಸ್ ಇದೆಯೇ ಎಂದು ಪತ್ತೆ ಹಚ್ಚಲು ಸುಮಾರು 218 ಮಾದರಿಗಳನ್ನು ಜಿನೋಮ್ ಸೀಕ್ವೆನ್ಸ್ ಪರೀಕ್ಷೆಗೆ ಕಳುಹಿಸಲಾಗಿದೆ. ಈಗಾಗಲೇ ಬಹುತೇಕ ವರದಿ ಬಂದಿದ್ದು, ನೆಗೆಟಿವ್ ಬಂದಿದೆ ಎಂದರು.ಮುಂದಿನ ವರದಿಗಾಗಿ ಕಾಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.