ಶಿರಸಿ: ಉತ್ತರಕನ್ನಡದಲ್ಲಿ ಮಹಿಳೆಯರು ಬಾಲಕಿಯರ ನಾಪತ್ತೆ ಪ್ರಕರಣ ಒಂದೆಡೆಯಾದರೆ‌, ಇನ್ನೊಂದೆಡೆ ಅಪಹರಣ ಪ್ರಕರಣಗಳೂ ವರದಿಯಾಗುತ್ತಿರುವುದು ಜನತೆಯ ಎದೆಯಲ್ಲಿ ಭಯ ಹುಟ್ಟಿಸುತ್ತಿದೆ. ಕಳೆದ ಕೆಲ ದಿನದ ಹಿಂದೆ ಅಪಹರಣ ಪ್ರಕರಣ ಸುದ್ದಿಯಾಗಿತ್ತು, ಇದೀಗ ಇಂತಹುದೇ ಮತ್ತೊಂದು ಪ್ರಕರಣ ವರದಿಯಾಗಿದೆ. ನಗರದ ನಿಲೇಕಣಿಯ ತನ್ನ ಮನೆಯಿಂದ ಕಾಲೇಜಿಗೆ ಹೊರಟ ಬಾಲಕಿ, ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ.

RELATED ARTICLES  ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ

ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆಗೆ ಕಾರಿನಲ್ಲಿ ಬಿಡುತ್ತೇನೆ ಎಂದು ನಂಬಿಸಿ, ವಿದ್ಯಾರ್ಥಿನಿಯನ್ನು ಅಪರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈಕೆ ಮನೆಯಿಂದ ಕಾಲೇಜಿಗೆಂದು ಹೊರಟಿದ್ದಳು. ಆಗ ಕಾರಿನಲ್ಲಿ ಬಂದ ಆರೋಪಿಗಳು ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಅಪಹರಣ ಮಾಡಿರುವುದಾಗಿ ಪ್ರಕರಣ ದಾಖಲಾಗಿದೆ.

RELATED ARTICLES  ಬಾಹ್ಯಾಕಾಶ ಕ್ಷೇತ್ರದಲ್ಲಿ ಸೂಪರ್ ಪವರ್ ಭಾರತ-ಪಿ.ಜೆ.ಭಟ್ಟ

ಬಾಲಕಿಯ ಪಾಲಕರು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದು,
ತಮ್ಮ ಮಗಳನ್ನು ಕಿಡ್ನ್ಯಾಪ್ ಮಾಡಿದ ಆರೋಪಿಯ ಬಗ್ಗೆ ಈ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಈತನ ವಿರುದ್ಧ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ತನಿಖೆಯ ನಂತರದಲ್ಲಿ ಪ್ರಕರಣದ ಸತ್ಯಾಂಶ ಹೊರಬರಬೇಕಿದೆ.