ಭಟ್ಕಳ: ತಾಲೂಕಿನ ಮುರುಡೇಶ್ವರ ಮಾವಳ್ಳಿ-1ರ ಸೋನಾರಕೇರಿಯಲ್ಲಿ ಮನೆ ಒಳಗಡೆ ಆಟವಾಡುತ್ತಿದ್ದ ಎರಡುವರೆ ವರ್ಷದ ಮಗುವಿನ ಮೇಲೆ ಬೀದಿ ನಾಯಿಯೊಂದು ಮನೆಯ ಒಳಗೆ ನುಗ್ಗಿ ಭೀಕರ ದಾಳಿ ನಡೆಸಿ ಕಚ್ಚಿದ ಹೃದಯ ವಿದ್ರಾವಕ ಘಟನೆ ಮಂಗಳವಾರದಂದು ನಡೆದಿದೆ. ನಾಯಿಯಿಂದ ದಾಳಿಗೊಳಗಾಗಿ ಗಾಯಗೊಂಡ ಮಗುವನ್ನು ದ್ರವ್ಯಾ ಸಂತೋಷ ನಾಯ್ಕ ಎಂದು ಗುರುತಿಸಲಾಗಿದೆ.
ನಾಯಿ ದಾಳಿನಡೆಸಿ ಎರಡೂವರೆ ವರ್ಷದ ಮಗುವಿನ ಮುಖದ ಭಾಗಕ್ಕೆ ಕಚ್ಚಿದ್ದು ಮಗುವಿನ ತುಟಿ ಹಾಗೂ ಕಣ್ಣಿನ ಕೆಳ ಭಾಗದಲ್ಲಿ ತೀವ್ರವಾಗಿ ಗಾಯಗಳಾಗಿವೆ. ದೃವ್ಯಾ ಮಕ್ಕಳೊಂದಿಗೆ ತನ್ನ ಮನೆಯೊಳಗೆ ಆಟವಾಡುತ್ತಿದ್ದ ವೇಳೆ ಹೊರಗಿನಿಂದ ಬಂದ ಬೀದಿ ನಾಯಿಯೊಂದು ಏಕಾಏಕಿ ಮನೆಯೊಳಗೆ ನುಗ್ಗಿ ಮಗು ಮೇಲೆ ದಾಳಿ ನಡೆಸಿದೆ. ದಾಳಿಯಿಂದ ಮಗುವಿನ ಪಾಲಕರು ತಪ್ಪಿಸಿ ತಕ್ಷಣ ಮಗುವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದ್ದಾರೆ.
Read More..