ಯಲ್ಲಾಪುರ : ಕಾರು ಹಾಗೂ ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಯಲ್ಲಾಪುರದಿಂದ ಬೆಳಗಾವಿಯ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದ ಇಬ್ಬರು ವಯೋವೃದ್ಧ ವ್ಯಕ್ತಿಗಳು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಿಗ್ಗೆ ಹಿರೇಬಾಗೇವಾಡಿಯಲ್ಲಿ ನಡೆದಿದೆ.
ಯಲ್ಲಾಪುರ ಪಟ್ಟಣದ ಮಚ್ಚಿಗಲ್ಲಿ ನಿವಾಸಿ ಸಯ್ಯದ ದಾವುದ್ ಸಯ್ಯದ ಇಸ್ಮಾಯಿಲ್, ಹಳೆಕೋರ್ಟ್ ಮಚ್ಚಿಗಲ್ಲಿ ನಿವಾಸಿ ಸುಶೀಲಾ ಡಿಕೋಸ್ಟಾ, ಹಾಗೂ ಕಾರಿನ ಚಾಲಕ
ಕಾಳಮ್ಮನಗರ ನಿವಾಸಿ ವಸಿಂ ಹುಸೇನಖಾನ್ ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತ ಪಟ್ಟ ದುರ್ದೈವಿಗಳಾಗಿದ್ದಾರೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸೈಯದ್ ದಾವುದ್ ಸೈಯದ್ ಇಸ್ಮಾಯಿಲ್ ಸಂಬಂಧಿಗಳಾದ ಸಯ್ಯದ ಮುಕ್ಕಾರ್ ಹಾಗೂ ಸಯ್ಯದ ಜಾವೇದ್ ಗಂಭೀರವಾಗಿ ಗಾಯಗೊಂಡಿದ್ದು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.