ಕುಮಟಾದ ಹಲವೆಡೆ ಸರಣಿ ಕಳ್ಳತನ ಸಂಭವಿಸಿದೆ. ಕುಮಟಾ ಪೋಸ್ಟಲ್ ಕಾಲೊನಿಯ ಬಾಲಚಂದ್ರ ನಾಯರ್ ಎಂಬುವವರ ಮನೆಯಲ್ಲಿ, ಕಿಟಕಿಯ ಗ್ರಿಲ್ಸ್ ತೆಗೆದು ಒಳ ನುಗ್ಗಿದ ಕಳ್ಳರು, ಸುಮಾರು 10ಸಾವಿರ ₹ ನಗದು, ಹಾಗೂ 2 ಚಿನ್ನದ ಬಳೆ ಕದ್ದೊಯ್ದಿದ್ದಾರೆ. ರಾತ್ರಿ ಸುಮಾರು 2 ಗಂಟೆಯ ಸಮಯದಲ್ಲಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಕಾರವಾರದಿಂದ ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿ ಕಲೆಹಾಕಿದ್ದಾರೆ. ಕುಮಟಾ ಠಾಣೆಯಲ್ಲಿ ಪ್ರರಣ ದಾಖಲಾಗಿದ್ದು ತನಿಖೆ ಮುಂದುವರಿಸಿದ್ದಾರೆ.

RELATED ARTICLES  ಜನ ಮನ ರಂಜಿಸಿದ ಗಾನ-ನಾಟ್ಯ ವೈಭವ