ಕುಮಟಾದಲ್ಲಿ ದೇವಾಲಯ ಹಾಗೂ ನಿರಂತರವಾಗಿ ಮನೆಗಳ್ಳತನ ನಡೆಯುತ್ತಿದ್ದು ಇದು ಪೋಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು.

ಸೆಪ್ಟೆಂಬರ್ 14 ರಂದು ಬೆಳಗಿನ ಜಾವ ತಂಡ್ರಕುಳಿಯ ಬೊಂಬೆ ಲಿಂಗೇಶ್ವರ ದೇವಸ್ಥಾನ ಮತ್ತು ಮಿರ್ಜಾನ್ ದುರ್ಗಾದೇವಿ ದೇವಸ್ಥಾನ ದಲ್ಲಿ ಕಳ್ಳತನ ನಡೆದಿತ್ತು . ಗ್ರಾಮಸ್ಥರು ಕಳ್ಳನನ್ನು ಕಂಡುಹಿಡಿಯಲು ತನಿಖೆಗೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲೇ ಪಿ.ಎಸ್.ಐ ಪದವಿಗೆ ಆಯ್ಕೆಯಾಗಿರುವ ಪವನ್ ನಾಯ್ಕ ಮಾದನಗೇರಿ ಇವರು ಕಳ್ಳನು ಮಾದನಗೇರಿಯಲ್ಲಿ ಮನೆ ಕಳ್ಳತನ ಮಾಡುವ ಸಂದರ್ಭದಲ್ಲಿ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು.

ಪವನ್ ನಾಯ್ಕ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಕಳ್ಳನ ಬಂಧನದಿಂದಾಗಿ ಜನತೆ  ಸ್ವಲ್ಪ ಮಟ್ಟಿಗೆ ನಿರಾಳರಾದಂತಾಗಿದೆ.