ರಾಯಚೂರು:  ವಾಲ್ಮೀಕಿ ಜಯಂತಿ ಹಾಗೂ ಬೆಂಗಳೂರಿನಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕುರಿತು ನಗರದ ಹರ್ಷಿತಾ ಗಾರ್ಡನ್‍ನಲ್ಲಿ  ಇಂದ  ಸಮಾಜದ ಮುಖಂಡರ ಸಭೆ ಕರೆಯಲಾಗಿದೆ ಎಂದು ಸಮಾಜದ ಮುಖಂಡ ದೇವಣ್ಣ ನಾಯಕ ತಿಳಿಸಿದ್ದಾರೆ.

ನಗರದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಲ್ಮೀಕಿ ಜಯಂತಿ ನಿಮಿತ್ತ ವಿಧಾನಸೌಧ ಆವರಣದಲ್ಲಿ ಅ.5ರಂದು ಮುಂಭಾಗದ ಬೃಹತ್ ಪ್ರಮಾಣದ ಮಹರ್ಷಿ ವಾಲ್ಮೀಕಿ ಪುತ್ಥಳಿ ಅವಾವರಣಗೊಳಿಸಲಾಗುವುದು ಎಂದು ದೇವಣ್ಣ ತಿಳಿಸಿದರು. ಇದೇ ವೇಳೆ ಸಮಾಜದಿಂದ ಸಮಾವೇಶ ನಡೆಯಲಿದೆ. ಕಾರ್ಯಕ್ರಮ ಯಶಸ್ವಿಗೊಳಿಸಲು ಕೈಗೊಳ್ಳಬೇಕಾದ ರೂಪುರೇಷೇಗಳ ಕುರಿತು ಸಮಾಲೋಚನೆ ನಡೆಸಲು ಸೋಮವಾರ ಸಮುದಾಯದ ಮುಖಂಡರ ಸಭೆ ಕರೆಯಲಾಗಿದೆ ಎಂದರು.

RELATED ARTICLES  ಶ್ರೀ ವಿಷ್ಣು ಸಹಸ್ರನಾಮ ವಿಷ್ಣುವ್ಯಾಖ್ಯಾ ಕೃತಿ ಬಿಡುಗಡೆ : ಮನಸ್ಸು ಸ್ಥಿರವಾದರೆ ಮೋಕ್ಷ, ಸಂಚರಿಸಿದರೆ ಸಂಸಾರ- ರಾಘವೇಶ್ವರ ಶ್ರೀ

ಸಭೆಗೆ ಸಹಕಾರಿ ಸಚಿವ ರಮೇಶ ಜಾರಕಿಹೊಳಿ, ಸಂಸದ ಬಿ.ವಿ.ನಾಯಕ, ವಿಧಾನ ಪರಿಷತ್ ಸದಸ್ಯ ಉಗ್ರಪ್ಪ, ಕುಲಗುರುಗಳು ಮತ್ತು ಸಮಾಜದ ಗಣ್ಯರು ಭಾಗವಹಿಸುವರು. ಅ.5ರಂದು ನಡೆಯಲಿರುವ ಸಮಾವೇಶಕ್ಕೆ ಐದು ಲಕ್ಷ ಜನ ಸೇರಿಸುವ ಗುರಿಯಿದೆ. ಆ ನಿಟ್ಟಿನಲ್ಲಿ ಮುಖಂಡರು ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಸಮಾಜ ಮುಖಂಡರೊಂದಿಗೆ ಸಮಾಲೋಚಿಸುತ್ತಿದ್ದಾರೆ. ಸಮಾವೇಶದಲ್ಲಿ ವಾಲ್ಮೀಕಿ ಸಮುದಾಯಕ್ಕೆ 7.5 ಮೀಸಲಾತಿ ನೀಡಬೇಕು ಎಂಬುದು ಸೇರಿ ವಿವಿಧ ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.

RELATED ARTICLES  ಇಂದು ರಾತ್ರಿಯಿಂದ ಭಾರತ ಲಾಕ್ ಡೌನ್…!