ಬೆಂಗಳೂರು:ಇವತ್ತು ಕೆಲವು  ಮಾಧ್ಯಮಗಳಲ್ಲಿ  ಗೌರಿ ಲಂಕೇಶ್ ಹತ್ಯೆ ತನಿಖೆ ನಡೆಸಲು ನೇಮಿತವಾದ  ವಿಶೇಷ ತನಿಖಾ ತಂಡ ಅದಕ್ಕೆ ಬಂದ ಫೋನ್ ಕರೆಗಳ ಸಂಖ್ಯೆ ಆಧಾರದ ಮೇಲೆ ರಾಮಚಂದ್ರಾಪುರ ಮಠದ ಶ್ರೀಗಳಾದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ವಿಚಾರಣೆ ನಡೆಸುವ ಸಾಧ್ಯತೆ ಕುರಿತಾಗಿ ವರದಿ ಮಾಡಲಾಗಿದೆ.

ಮೊದಲಾಗಿ ಒಬ್ಬ ತನಿಖಾಧಿಕಾರಿ ನಿರ್ದೇಶಿಸಲ್ಪಡುವ / ನಿರ್ದೇಶಿಸ ಪಡಬೇಕಾದ ಭಾರತೀಯ ಕಾನೂನುಗಳಾದ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ / ಭಾರತೀಯ ದಂಡ ಸಂಹಿತೆ ಅಥವಾ ಭಾರತೀಯ ಸಾಕ್ಷ್ಯ ಕಾಯಿದೆ  ಗಳು ವಿಸ್ತೃತವಾಗಿ ತನಿಖೆ ಯ ವಿವಿಧ ಹಂತಗಳನ್ನು ನಿರ್ದೇಶನ ಮಾಡುತ್ತೇವೆ . ಅವುಗಳ ಪ್ರಕಾರ ಒಬ್ಬ ತನಿಖಾಧಿಕಾರಿ ಸಾಕ್ಷಿ ಪುರಾವೆ ಹಾಗೂ ಹಲವಾರು ಕುರುಹುಗಳನ್ನು ಬೆನ್ನು ಹಿಡಿದು ತನಿಖೆ ಮಾಡುವುದು ಸಮ್ಮತವಾಗಿರುತ್ತದೆ . ಆದರೆ ಎಲ್ಲಿಯೂ ಕೂಡ ಒಪೀನಿಯನ್ ಪೋಲ್ ಆಧರಿಸಿ ತನಿಖೆ ಮಾಡಬಹುದೆಂದು ಹೇಳುವುದಿಲ್ಲ .. ಅದು ಯಾವುದೇ ರೀತಿಯಲ್ಲೂ ವೈಜ್ಞಾನಿಕ ಹಾಗೂ ಸಾಮಾನ್ಯ ಜ್ಞಾನವೂ ಅಲ್ಲ ಎಂದು ಸಂಸ್ಥಾನ ಹೇಳಿದೆ.

ಇದರ ಜೊತೆ ಜೊತೆಗೆ ಮಾಧ್ಯಮಗಳ ವರದಿಗಳ ಪ್ರಕಾರ ಶ್ರೀಗಳ ಮೇಲೆ ಸುಳ್ಳು ಆರೋಪವೊಂದನ್ನು ದಾಖಲಿಸಿದ್ದ ವ್ಯಕ್ತಿಗಳು ಗೌರಿ ಲಂಕೇಶ್ ಹತ್ಯೆ ಆದ ಮೂರನೇ ದಿವಸಕ್ಕೆ / ತನಿಖಾ ತಂಡ ರಚನೆ ಆದ ಮೊದಲನೇ ದಿವಸವೇ ತನಿಖಾ ತಂಡವನ್ನೂ ಭೇಟಿ ಮಾಡಿ ಆರೋಪ ಮಾಡಿದ್ದು ಹಾಗೂ ತನಿಖಾ ತಂಡದ ದೂರವಾಣಿ ಸಂಖ್ಯೆಗೆ ಕರೆ ಮಾಡಿ / ಮಾಡಿಸಿ ಶ್ರೀಗಳ ಹೆಸರು ಹೇಳಿರುವುದು  ಅನಾವಶ್ಯಕವಾಗಿ ಈ ಪ್ರಕರಣಕ್ಕೆ ಶ್ರೀಗಳನ್ನು ಎಳೆದು ತಂದು ಅವರಿಗೆ ತೊಂದರೆ ಕೊಡುವ ಒಂದು ವ್ಯವಸ್ಥಿತ ತಂತ್ರವೆಂದು ಮೇಲ್ನೋಟಕ್ಕೇ ಕಂಡು ಬರುತ್ತಿದ್ದು , ಜೊತೆಗೆ , ಇದರ ಉದ್ದೇಶ ನಿಜವಾದ ಕೊಲೆಗಾರರರನ್ನು ಬಚಾವ್ ಮಾಡುವುದಾಗಿದೆಯೋ  ಎಂಬುದನ್ನು ಕೂಡ ತನಿಖಾ ತಂಡ ಪತ್ತೆ ಹಚ್ಚಬೇಕಾಗಿದೆ  –  ಅಲ್ಲದೇ ತನಿಖಾ ತಂಡ ದೂರವಾಣಿ ಕರೆ ಕೊಡುವುದು ಸುಳಿವು ನೀಡದ ಹೊರತು ಸುಳ್ಳು ಆರೋಪ ಮಾಡಲಲ್ಲ . ಕರೆ ಮಾಡಿ ಸುಳಿವು ನೀಡದೇ ಸುಳ್ಳು ಆರೋಪ ಮಾಡುವ ವ್ಯಕ್ತಿಗಳ ಹಿನ್ನೆಲೆ ಹಾಗೂ ಈ ಪ್ರಕರಣಕ್ಕೆ ಅವರಿಗಿರುವ ಸಂಬಂಧ ಗಳ ಕುರಿತಾಗಿ ವಿಸ್ತೃತ ತನಿಖೆ ಯ ಅವಶ್ಯಕತೆ ಇದೆ ಎಂದು ರಾಮಚಂದ್ರಾಪುರ ಮಠ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಅದೂ ಅಲ್ಲದೆ , ಅತ್ಯಂತ ರಹಸ್ಯವಾಗಿ ನಡೆಯಬೇಕಿರುವ ಒಂದು ಕೊಲೆ ಪ್ರಕರಣದ ತನಿಖೆಯ ಅತ್ಯಂತ ಸಣ್ಣ ಸಣ್ಣ ವಿಷಯಗಳೂ ಸಾರ್ವಜನಿಕವಾಗುತ್ತಿರುವುದು ಮತ್ತು ಕೆಲವು ಮೂರನೆಯ ವ್ಯಕ್ತಿಗಳಿಗೆ ಸಿಗುತ್ತಿರುವುದು ಈ ತನಿಖೆ ಸಾಗುತ್ತಿರುವ ದಿಕ್ಕು ಹಾಗೂ ಅದರ ಉದ್ದೇಶಗಳ ಬಗೆಗೆ  ಆತಂಕ ಹುಟ್ಟಿಸುತ್ತಿವೆ .

ಗೌರಿ ಲಂಕೇಶ್​​ ಕೊಲೆ ತನಿಖೆ ಸೂಕ್ತವಾಗಿ ನಡೆದು ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ರಾಮಚಂದ್ರಾಪುರ ಮಠ ಆಗ್ರಿಸುತ್ತದೆ ಎಂದು ಹೇಳಿದೆ. ಆದರೆ ಕೊಲೆಯ ತನಿಕೆ ಹೆಸರಿನಲ್ಲಿ ದುರುದ್ದೇಶ ಪೂರ್ವಕ ಹಾಗೂ ಕೆಲವು ದುಷ್ಟ ಶಕ್ತಿಗಳ ಹಿತಾಸಕ್ತಿ ರಕ್ಷಿಸಲು ಅನಗತ್ಯವಾಗಿ   ಶ್ರೀಗಳ ಹೆಸರು ಎಳೆದು ತಂದು ಅವರ ಚಾರಿತ್ರ ಹರಣ ಮಾಡಲು ಪ್ರಯತ್ನಿಸುವ ಯಾವುದೇ ಪ್ರಯತ್ನ ವನ್ನು ರಾಮಚಂದ್ರಾಪುರ ಮಠ ತೀವ್ರವಾಗಿ ಖಂಡಿಸುತ್ತದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ.