ಭಟ್ಕಳ: ಗದ್ದೆ ಕೆಲಸದಲ್ಲಿ ನಿರತಳಾಗಿದ್ದ ಮಹಿಳೆಯೋರ್ವರಿಗೆ ವಿಷ ಪೂರಿತ ಹಾವೊಂದು ಕಚ್ಚಿದ ಪರಿಣಾಮವಾಗಿ ಭಟ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತ ಮಹಿಳೆಯನ್ನು ಕೊಪ್ಪ ಪಂಚಾಯತ ಕಟಗಾರ ಕೊಪ್ಪ ಅತ್ತಿಬಾರದ ನಿವಾಸಿ ಮಂಗಳಿ ತಿಮ್ಮಪ್ಪ ಗೊಂಡ ಎಂದು ಗುರುತಿಸಲಾಗಿದೆ. ಮೃತರು ಪತಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸೈ ರವೀಂದ್ರ ಬಿರಾದಾರ ತನಿಖೆ ಕೈಗೊಂಡಿದ್ದಾರೆ.