ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗಾಗಾ ಸಾರ್ವಜನಿಕವಾಗಿ ತಪ್ಪಾಗಿ ಮಾತನಾಡಿ ತಮಾಷೆಗೊಳಗಾಗುತ್ತಾರೆ. ಇದೀಗ ಮತ್ತೆ ಅಂತಹದ್ದೇ ಎಡವಟ್ಟು ಮಾಡಿದ್ದಾರೆ.

 
ಫೈವ್ ಸ್ಟಾರ್ ರ್ಯಾಂಕಿಗೆ ಬಡ್ತಿ ಪಡೆದ ಏಕೈಕ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಐಎಎಫ್ ಮಾರ್ಷಲ್ ಅರ್ಜುನ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿ ಟ್ವಿಟರ್ ನಲ್ಲಿ ರಾಹುಲ್ ಸಂದೇಶ ಬರೆದಿದ್ದರು.

RELATED ARTICLES  ಮಕ್ಕಳಿಗಿರಲಿ ಸಹಜ ನಗು

ಆದರೆ ಸಂದೇಶ ಬರೆಯುವಾಗ ತಪ್ಪು ಮಾಡಿದ್ದಾರೆ. ಮಾರ್ಷಲ್ ಆಫ್ ಇಂಡಿಯನ್ ಏರ್ ಫೋರ್ಸ್ ಎನ್ನುವ ಬದಲು ಏರ್ ಮಾರ್ಷಲ್ ಎಂದು ಬರೆದಿದ್ದಾರೆ. ಮಾರ್ಷಲ್ ಆಫ್ ಇಂಡಿಯನ್ ಏರ್ ಫೋರ್ಸ್ ಹುದ್ದೆಗೆ ಐದು ಸ್ಟಾರ್ ಇರುತ್ತದೆ. ಆದರೆ ಏರ್ ಮಾರ್ಷಲ್ ಹುದ್ದೆಗೆ ಮೂರು ಸ್ಟಾರ್ ಇರುತ್ತದೆ. ಹೀಗಾಗಿ ರಾಹುಲ್ ಗಾಂಧಿ ಮಾಡಿದ ಈ ಎಡವಟ್ಟು ಮತ್ತೊಮ್ಮೆ ಅವರ ವಿರೋಧಿಗಳ ಟೀಕೆಗೆ ಗುರಿಯಾಗಿದೆ.

RELATED ARTICLES  ಕೊರೋನಾ ಕರ್ಫ್ಯೂ : ಸ್ತಬ್ಧವಾಯ್ತು ಕುಮಟಾ