ಹೊನ್ನಾವರ :ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಖಾಸಗಿ ವಾಹಿನಿ ವರದಿಗಾರ ಮಂಜು ಹೊನ್ನಾವರ ಎನ್ನುವಾತ ಬಂದರಿನಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡು ಬಂದರಿನಲ್ಲಿ ಈ ಘಟನೆ ನಡೆದಿದೆ. ಹೊನ್ನಾವರ ಮೂಲದ ಮಂಜು ಹೊನ್ನಾವರ್ (೩೪ )ಸಾವು ಕಂಡ ದುರ್ದೈವಿಯಾಗಿದ್ದು ಈತ ಟಿ.ವಿ.9 ಹಾಗೂ ಸಮಯ ಟ.ವಿ ಯಲ್ಲಿ ವರದಿಗಾರನಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದರು.ಇವರು ಕಾಲು ಜಾರಿ ನದಿಯಲ್ಲಿ ಬಿದ್ದಿರುವ ಬಗ್ಗೆ ಶಂಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

RELATED ARTICLES  ಹಿರೇಗುತ್ತಿ ಶ್ರೀ ಬ್ರಹ್ಮಜಟಕ ಯುವಕ ಸಂಘದ ಗಣರಾಜ್ಯೋತ್ಸವ ಧ್ವಜಾರೋಹಣ

 

ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂದು ಪೊಲೀಸ್ ತನಿಖೆಯ ನಂತರ ತಿಳಿದು ಬರಬೇಕಾಗಿದೆ.