ಅಂಕೋಲಾ : 2020ನೇ ಸಾಲಿನ ಕರ್ನಾಟಕ ಸಿವಿಲ್ ಪೊಲೀಸ್ ಸಬ್ ಇನ್ಸೆಪೆಕ್ಟರ್ ಪರೀಕ್ಷೆಯಲ್ಲಿ ಗೋಕರ್ಣ ಹಿರೇಗುತ್ತಿಯಲ್ಲಿ ಪ್ರಜ್ವಲ್ ನಾಯಕ ಕರ್ನಾಟಕ ರಾಜ್ಯಕ್ಕೆ 19ನೇ ರಾಂಕ್ ನಲ್ಲಿ ಉತ್ತೀರ್ಣರಾಗಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ಆಯ್ಕೆ ಆಗಿದ್ದಾರೆ. ಹಿರೇಗುತ್ತಿಯ ಪ್ರತಿಭಾನ್ವಿತ ಯುವಕ ಹಾಗೂ ಮಾದರಿ ವ್ಯಕ್ತಿತ್ವದ ಇವರು ತಾಲೂಕಿನ ವೆಂಕಣ್ಣ ಮತ್ತು ಮಂಗಲಾಳ ಮಗನಾಗಿದ್ದಾರೆ. ಇವರು ಉತ್ತಮ ಕ್ರೀಡಾಪಟು ಕೂಡ ಹೌದು.ಇವರು ಸ್ವಾತಂತ್ರ್ಯ ಯೋಧ ದಿ. ದೇವಣ್ಣನಾಯಕ ಹಾಗೂ ಬೀರಣ್ಣ ಹೊಸಬಣ್ಣ ನಾಯಕ ಇವರ ಮೊಮ್ಮಗನಾಗಿದ್ದಾರೆ.
ಇವರ ಸಾಧನೆಗೆ ಕುಟುಂಬದ ಸದಸ್ಯರು ಊರಿನ ನಾಗರಿಕರು ಹಾಗೂ ತಾಲೂಕಿನ ಎಲ್ಲಾ ದೇಶಗಳು ಅಭಿನಂದನೆ ಸಲ್ಲಿಸಿದ್ದಾರೆ.