ಅಂಕೋಲಾ: ತಾಲೂಕಿನ ಬೇಲೆಕೇರಿಯ ಡಾ.ಶಾಂತಲಾ ಕಲಗುಜ್ಜಿ ಅವರಿಗೆ ಇತ್ತೀಚಿಗೆ ನಡೆದ ಮಂಗಳೂರಿನ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾಸ್ಟರ್ ಇನ್ ಡೆಂಟಲ್ ಸರ್ಜರಿಯಲ್ಲಿ ಚಿನ್ನದ ಪದಕ ಪ್ರದಾನ ಮಾಡಲಾಗಿದೆ. ಶಾಂತಲಾ ಕಲಗುಜ್ಜಿ ಅವರು ಮಾಸ್ಟರ್ ಇನ್ ಡೆಂಟಲ್ ಸರ್ಜರಿಯಲ್ಲಿ ಮಂಗಳೂರಿನ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ಗೆ ಟಾಪರ್ ಆಗಿದ್ದು, ಈ ಸಾಧನೆ ಹಾಗೂ ಇತರ ಚಟುವಟಿಕೆಗಳಲ್ಲಿ ತೋರಿದ ಸಾಧನೆ ಹಿನ್ನೆಲೆಯಲ್ಲಿ ಚಿನ್ನದ ಪದಕ ಹಾಗೂ ಬೆಸ್ಟ್ ಔಟ್ ಗೋಯಿಂಗ್ ಸ್ಟುಡೆಂಡ್ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.
ಶಾಂತಲಾ ಕಲಗುಜ್ಜಿ ಅವರು ನಿವೃತ್ತ ಹೈಸ್ಕೂಲ್ ಶಿಕ್ಷಕ ಕೃಷ್ಣಮೂರ್ತಿ ನಾರಾಯಣ ಕಲಗುಜ್ಜಿ, ಬಿಎಸ್‌ಎನ್‌ಎಲ್ ನಿವೃತ್ತ ಉದ್ಯೋಗಿ ಸಾಧನಾ ಕಲಗುಜ್ಜಿ ಅವರ ಪುತ್ರಿಯಾಗಿದ್ದಾರೆ. ಶಾಂತಲಾ ಅವರು ಪ್ರಾಥಮಿಕ ಶಿಕ್ಷಣವನ್ನು ಕಾರವಾರದ ಬಾಲಮಂದಿರದಲ್ಲಿ ಹಾಗೂ ಪಿಯುಸಿ ಶಿಕ್ಷಣವನ್ನು ಕಾರವಾರದ ಸರಕಾರಿ ಪಿಯು ಕಾಲೇಜಿನಲ್ಲಿ ಪೂರ್ಣಗೊಳಿಸಿ ಮಂಗಳೂರಿನ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ 5 ವರ್ಷಗಳ ಬಿಡಿಎಸ್ ಕೋರ್ಸ್ ಪೂರ್ಣಗೊಳಿಸಿ ನಂತರ ಇಲ್ಲಿಯೇ 3 ವರ್ಷಗಳ ಮಾಸ್ಟರ್ ಡೆಂಟಲ್ ಸರ್ಜರಿಯಲ್ಲಿ ಕಾಲೇಜಿಗೆ ಪ್ರಥಮ ಬ್ಯಾಂಕ್‌ನೊಂದಿಗೆ ಪೂರ್ಣಗೊಳಿಸಿದ್ದಾರೆ.