ಕುಮಟಾ :ಕೆನರಾ ವೆಲಫೇರಟ್ರಸ್ಟ್ ನ ಸಂಸ್ಥಾಪಕರಾದ ದಿವಂಗತಡಾ|| ದಿನಕರ ದೇಸಾಯಿಯವರ ಸಂಸ್ಥಾಪನಾ ದಿನಾಚರಣೆಯನ್ನುಕುಮಟಾ ತಾಲೂಕಿನ ಕತಗಾಲದ ಕಮಲಾಬಾಯಿ ಪಿಕಳೆ ಹೈಸ್ಕೂಲಿನಲ್ಲಿ ಬಹಳ ಅರ್ಥಪೂರ್ಣವಾಗಿಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನ ಅಧ್ಯಕ್ಷರೂಆದ ನಾಗರಾಜ ನಾಯಕತೊರ್ಕೆಅವರು ಉದ್ಘಾಟಿಸಿ ಮಾತನಾಡಿಡಾ|| ದೇಸಾಯಿಯವರು ಈ ಜಿಲ್ಲೆಕಂಡಂಥಅದ್ಭುತ ಸಾಹಿತಿ ಹಾಗೂ ಶಿಕ್ಷಣ ಪ್ರೇಮಿಗಳಾಗಿದ್ದಾರೆ. ಎಮ್.ಏ.ಎಲ್.ಎಲ್.ಬಿ. ಪದವೀಧರರಾಗಿದ್ದಇವರುಉತ್ತಮ ಹುದ್ದೆಯನ್ನು ಬಿಟ್ಟು ಸಮಾಜಸೇವೆಯತ್ತ ಮುಖಮಾಡಿದಾಗಅವರ ಈ ನಡೆಯನ್ನುಅವರತಂದೆಯವರು ಪ್ರೋತ್ಸಾಹಿಸಿದ್ದರು.ಚುಟುಕು ಬ್ರಹ್ಮಎಂದೇಖ್ಯಾತರಾದಅವರ ಚುಟುಕುಗಳು ಜೀವನ ಮತ್ತು ಸಾಮಾಜಿಕ ಮೌಲ್ಯವನ್ನುಎತ್ತಿ ಹಿಡಿಯುತ್ತವೆ. ರಾಜಕೀಯವಾಗಿಯೂಇವರು ಗುರುತಿಸಿಕೊಂಡಿದ್ದು ಈ ಭಾಗದ ಲೋಕಸಭಾ ಸಂಸದರಾಗಿಯೂ ಸೇವೆ ಸಲ್ಲಿಸಿದ್ದರು ಎನ್ನುವುದನ್ನು ಸ್ಮರಿಸುತ್ತಾ ವಿದ್ಯಾರ್ಥಿಗಳು ಇಂತಹ ಮಹಾನ್ ವ್ಯಕ್ತಿಗಳನ್ನು ತಮ್ಮಆದರ್ಶವನ್ನಾಗಿಟ್ಟುಕೊಂಡು ಶಿಕ್ಷಣದೊಂದಿಗೆ ಕ್ರೀಡೆ, ಸಾಹಿತ್ಯ, ಮುಂತಾದ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಪರಿಪೂರ್ಣರಾಗಬೇಕೆಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ ಶಾಲಾಭಿವೃದ್ಧಿ ಸಮಿತಿಯಅಧ್ಯಕ್ಷರಾದ ವಿವೇಕ ಎಮ್.ಜಾಲಿಸತ್ಗಿಯವರು ಮಾತನಾಡಿಜಿಲ್ಲೆಯ ಮಕ್ಕಳು ಶಿಕ್ಷಣದಿಂದ ವಂಚಿತರಾಗದೇಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕೆಂಬ ದೂರದೃಷ್ಟಿಯಿಂದಅಂದುಡಾ|| ದಿನಕರದೇಸಾಯಿಯವರುಕಟ್ಟಿ ಬೆಳೆಸಿದ ಕೆನರಾ ವೆಲಫೇರಟ್ರಸ್ಟ್‍ಇಂದು ಸದ್ರಢ ಹಾಗೂ ಬೃಹತ್ ಶಿಕ್ಷಣಸಂಸ್ಥೆಯಾಗಿ ಬೆಳಗುತ್ತಿದೆ. ಉತ್ತಮಗುಣಮಟ್ಟದ ಶಿಕ್ಷಣದೊಂದಿಗೆ ಅಗತ್ಯ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಭವಿಷ್ಯವನ್ನುರೂಪಿಸುತ್ತಿದೆಎಂದುಅವರು ಮಿತವ್ಯಯಿಗಳಾಗಿದ್ದರು ಎನ್ನುವುದನ್ನು ಸ್ಮರಿಸಿಕೊಂಡರು.
ಇದೇ ವೇದಿಕೆಯಲ್ಲಿಕ್ರೀಡೆ ಹಾಗೂ ಇನ್ನಿತರ ಪಠ್ಯೇತರ ಚಟುವಟುಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಿ.ಆರ್. ಭಟ್.,ದೈಹಿಕ ಶಿಕ್ಷಕ ಜಿ.ಕೆ.ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕರಾದಎಸ್.ಎಸ್.ಕೊರವರರವರು ಸ್ವಾಗತಿಸಿದರು. ಸಹಶಿಕ್ಷಕಿ ಶ್ರೀಮತಿ ಮಂಗಲಾ ಶೆಟ್ಟಿ ವಂದಿಸಿದರು.ಶಿಕ್ಷಕರಾದ ಅಶೋಕ ಭಟ್ ನಿರೂಪಿಸಿದರು.