ಬಿಜೆಪಿ ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಶುಭ ಸಂದರ್ಭದಂದುಗೋಕರ್ಣದ ಗಂಗಾವಳಿಯ ಗಂಗಾಮಾತಾದೇವಸ್ಥಾನದ ಸಭಾಭವನದಲ್ಲಿಕೇಂದ್ರದಉಜ್ವಲ ಯೋಜನೆಯಡಿ ವಿವಿಧ ವರ್ಗಗಳ 27  ಫಲಾನುಭವಿಗಳಿಗೆ ಉಚಿತಗ್ಯಾಸ್ ವಿತರಣಾಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 

ಕುಮಟಾ ಬಿಜೆಪಿ ಮಂಡಲಾಧ್ಯಕ್ಷರಾದಕುಮಾರ ಮಾರ್ಕಂಡೇಯಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿಕೇಂದ್ರ ಸರಕಾರಜಾರಿಗೆತಂದ ಹಲವು ಜನಪರ ಯೋಜನೆಗಳಲ್ಲಿ ಉಜ್ವಲ ಯೋಜನೆಕೂಡಒಂದಾಗಿದೆ. ಬಿಜೆಪಿ ಕಾರ್ಯಕರ್ತರು ಫಲಾನುಭವಿಗಳ ಮನೆ ಮನೆಗೆ ತೆರಳಿ ಈ ಯೋಜನೆಯಅನುಕೂಲತೆಒದಗಿಸುತ್ತಿದ್ದಾರೆ. ನಾಗರಾಜ ನಾಯಕತೊರ್ಕೆಅವರು ಹಲವಾರು ಸಾಮಾಜಿಕ ಕಾರ್ಯಗಳಳಲ್ಲಿ ತೊಡಗಿಸಿಕೊಂಡು ಅವರೂಕೂಡ ಫಲಾನುಭವಿಗಳಿಗೆ ಉಚಿತಗ್ಯಾಸ್‍ಕಿಟ್ ದೊರಕಿಸಿಕೊಡುವಲ್ಲಿ ಶ್ರಮಿಸುತ್ತಿದ್ದುಉಚಿತ ಲೈಟರಗಳನ್ನು ಸಹ ವಿತರಿಸುತ್ತಿದ್ದಾರೆಎಂದು ನಾಗರಾಜ ನಾಯಕಅವರಕಾರ್ಯವನ್ನು ಶ್ಲಾಘಿಸಿದರು. ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನ ಅಧ್ಯಕ್ಷರೂಆದ ನಾಗರಾಜ ನಾಯಕತೊರ್ಕೆಅವರು ಮಾತನಾಡಿ ಮೋದಿ ನೇತ್ರತ್ವದಕೇಂದ್ರ ಸರಕಾರದಉಜ್ವಲ ಯೋಜನೆಅತ್ಯಂತ ಮಹತ್ವಕಾಂಕ್ಷಿಯೋಜನೆಯಾಗಿದೆ.ಬಡ ಫಲಾನುಭವಿಗಳು ಸಮಯ, ಹಣ, ವ್ಯಯಿಸದೆಅಲೆದಾಟವಿಲ್ಲದೆ ಸುಲಭವಾಗಿಉಚಿತಗ್ಯಾಸ್ ಪಡೆದುಕೊಳ್ಳಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರ ಸಹಕಾರದೊಂದಿಗೆ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್‍ಕಾರ್ಯನಿರ್ವಹಿಸುತ್ತಿದೆ.

RELATED ARTICLES  ಅಕ್ರಮಗಳನ್ನು ತಡೆಯಲು ಉತ್ತರ ಕನ್ನಡ ಜಿಲ್ಲಾಡಳಿತ ಮತ್ತಷ್ಟು ಕ್ರಮ: ಜಾರಿಯಾದ ಮಾದರಿ ನೀತಿ ಸಂಹಿತೆ.

 

ಈ ಯೋಜನೆಯಡಿ 2011ಕ್ಕೂ ಪೂರ್ವದಲ್ಲಿ ನೊಂದಣಿಯಾದಗ್ಯಾಸ್ ಸಂಪರ್ಕ ಹೊಂದಿರದ ಬಿಪಿಎಲ್‍ಕಾರ್ಡುದಾರರಿಗೆ ಮಾತ್ರಉಚಿತಗ್ಯಾಸ್‍ಕಿಟ್ ವಿತರಸಲಾಗುತ್ತಿದೆ.ಡಿಸೆಂಬರ್ ತಿಂಗಳಲ್ಲಿ ಬಿಪಿಲ್ ಕಾರ್ಡ ಹೊಂದಿದಎಲ್ಲಾ ಫಲಾನುಭವಿಗಳಿಗೂ ಈ ಯೋಜನೆ ವಿಸ್ತರಿಸಲಿದೆ.ಮುಂದಿನ ದಿನಗಳಲ್ಲೂ ಫಲಾನುಭವಿಗಳಿಗೆ ಸಹಾಯ ಸಹಕಾರ ನೀಡುತ್ತೇವೆಎಂದು ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಕೈಗೊಳ್ಳಬಹುದಾದ ಹಲವು ಅಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿ ನೀಡಿದರು.ಜಿಲ್ಲಾ ಪಂಚಾಯತ್ ಸದಸ್ಯೆಗಾಯಿತ್ರಿಗೌಡಅವರು ಮಾತನಾಡಿಉಜ್ವಲ ಯೋಜನೆಯಉದ್ದೇಶ ಹಾಗೂ ಗ್ಯಾಸ್ ಬಳಕೆಯ ಸುರಕ್ಷತೆಯಕುರಿತು ಮಾಹಿತಿ ನೀಡಿದರು.

RELATED ARTICLES  ದೂರವಾಯ್ತು ಬಾಂಬ್ ಆತಂಕ : ಏನಿತ್ತು ಅಲ್ಲಿ?

 

ಶ್ರೀನಿವಾಸ ನಾಯಕ, ಚಂದ್ರಶೇಖರ ನಾಯ್ಕ, ಜಗದೀಶ ಅಂಬಿಗ ಹಾಗೂ ಈ ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ ಜಿ.ಎಸ್.ಗುನಗಾ ಅವರುಗಳು ಮಾತನಾಡಿದರು.ಈ ಸಂಧರ್ಬದಲ್ಲಿ ನಿವೃತ್ತ ಕೆ.ಎಸ್.ಆರ್.ಟಿ.ಸಿ.ಕಂಟ್ರೋಲರ್ ಸದಾನಂದ ನಾಯಕ, ದಯಾನಂದ ನಾಯ್ಕ, ವೆಂಕ್ಟು ಕವರಿ, ಪಾಂಡುರಂಗ ನಾಯ್ಕ, ವಸಂತ ಶೆಟ್ಟಿ, ಗಣೇಶ ಅಂಬಿಗ, ಗಣಪತಿ ನಾಯ್ಕ, ಶೇಖರ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಶೀಲಾ ಮೇಸ್ತ ಸ್ವಾಗತಿಸಿ ನಿರೂಪಿಸಿ ವಂದಿಸಿದರು.