ಕುಮಟಾ: ಜಿಲ್ಲೆಯಾದ್ಯಂತ ಈ ವರ್ಷ ಮಳೆ ಕಡಿಮೆಯಾಗಿ ಒಂದೆಡೆ ಕೃಷಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಕೃಷಿ ಪೂರಕ ವೃತ್ತಿಯಾದ ಹೈನುಗಾರಿಕೆಗೂ ಕಂಟಕ ಎದುರಾಗುತ್ತಿದೆ. ಜಿಲ್ಲೆಯ ಹಲವು ತಾಲೂಕಿನ ರೈತರು ತಾವು ಸಾಕಿದ ರಾಸುಗಳನ್ನು ಮಾರಾಟ ಮಾಡುವ ಸ್ಥಿತಿ ಬಂದೊದಗಿದೆ. ಈ ವರ್ಷ ಜಿಲ್ಲೆಯಾದ್ಯಂತ ಪ್ರತಿನಿತ್ಯ 40 ಸಾವಿರಕ್ಕೂ ಹೆಚ್ಚು ಲೀ. ಹಾಲು ಸಂಗ್ರಹಣೆಯಾಗುತ್ತಿದ್ದು ಈಗಾಗಲೇ ಕುಮಟಾ 20, ಶಿರಸಿಯಲ್ಲಿ 77, ಯಲ್ಲಾಪುರ 27, ಸಿದ್ದಾಪುರ 49, ಹಾಲು ಉತ್ಪಾದಕ ಘಟಕಗಳು ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ 208 ಕ್ಕೂ ಹೆಚ್ಚು ಹಾಲು ಉತ್ಪಾದಕ ಘಟಕಗಳಿವೆ. ಜಿಲ್ಲೆಯ ಕೆಲ ರೈತರು ಮುಖ್ಯ ವೃತ್ತಿಯನ್ನಾಗಿ ಕೃಷಿಯನ್ನು ಅವಲಂಬಿಸಿದ್ದರೆ ಕೃಷಿಯ ಪೂರಕ ವೃತ್ತಿ ಹೈನುಗಾರಿಕೆಯಲ್ಲಿಯೂ ಸಹ ತರಮ್ಮನ್ನು ತೊಡಗಿಸಿಕೊಂಡು ಸಾಧನೆ ಮಾಡಿದ್ದಾರೆ. ಪ್ರತಿನಿತ್ಯ ಮುಂಜಾನೆ ಹಾಗೂ ಸಂಜೆಯ 2 ಗಂಟೆ ವೇಳೆಯನ್ನು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಧಾರವಾಡ ಹಾಲು ಒಕ್ಕೂಟಕ್ಕೆ ಹಾಲು ನೀಡುತ್ತಾ ಸಾಂಪ್ರದಾಯಿಕವಾಗಿ ಬಂದ ಪದ್ದತಿಯನ್ನು ವೃತ್ತಿಯನ್ನಾಗಿ ಪರಿಗಣ ಸಿಕೊಂಡು ಹೈನುಗಾರಿಕೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಧಾರವಾಡ ಹಾಲೂ ಒಕ್ಕೂಟ ಮಹಾಮಂಡಳಿಯಡಿಯಲ್ಲಿ ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಹಾಲು ಉತ್ಪಾದಕರ ಸಂಘಗಳನ್ನು ಸ್ಥಾಪಿಸಿಕೊಂಡು ಹಾಲು ಖರೀದಿ ಮಾಡುತ್ತಾ ಬಂದಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಹಾಲಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯಲ್ಲಿಯೇ ಹಾಲು ಒಕ್ಕೂಟ ಪ್ರಾರಂಭಿಸಬೇಕೆಂದು ಸಾರ್ವಜನಿಕರಿಂದ ಅಭಿಪ್ರಾಯಗಳು ಕೇಳಿಬಂದಿದ್ದವು. ಆದರೆ ಕಳೆದ ಎರಡು ವರ್ಷಗಳಿಂದ ಮಳೆ ಪ್ರಮಾಣ ಕಡಿಮೆಯಾಗಿ ಭೀಕರ ಬರಗಾಲ ಎದುರಿಸುತ್ತಿರುವ ಹೈನುಗಾರರು ರಾಸುಗಳ ಪಾಲನೆ ಹಾಗೂ ಪೋಷಣೆ ಮಾಡಲು ಕಷ್ಟಸಾಧ್ಯ ಎಂದು ಹೈನುಗಾರಿಕೆಯಿಂದ ಹಿಂದೆ ಸರಿಯುತ್ತಿರುವುದು ಜಿಲ್ಲೆಯಾದ್ಯಂತ ಬೆಳಕಿಗೆ ಬರುತ್ತಿದೆ.
ಊಹಿಸಲಾರದ ಮೇವಿನ ಕೊರತೆ…
ನಮ್ಮ ಜಿಲ್ಲೆಯಲ್ಲಿ ಅಗತ್ಯವಿರುವ ಮೇವಿನ ಪೂರೈಕೆ ಕಷ್ಟ ಸಾಧ್ಯವಾಗಿರುವುದರಿಂದ ಹೊರ ಜಿಲ್ಲೆಯಿಂದ ಮೇವುಗಳನ್ನು ಖರೀದಿಸುತ್ತಿದ್ದರು. ಆದರೆ ಈ ವರ್ಷ ರಾಜ್ಯಾಧ್ಯಂತ ತೋರಿರುವ ಭೀಕರ ಬರಗಾ¯ದಿಂದ ಭತ್ತದ ಬೆಳೆ ನೀರಿಲ್ಲದೆ ಓಣಗಿದೆರುವುದರಿಂದ ಭತ್ತದ ಬೆಳೆ ಉತ್ತಮವಾಗಿ ಬಂದಿಲ್ಲವಾದ್ದರಿಂದ ತಮ್ಮ ಜಿಲ್ಲೆಗೆ ಮೇವಿನ ತುಟಾಗ್ರತೆ ಏದುರಾಗಿರುವುದರಿಂದ ಹೊರ ಜಿಲ್ಲೆಗೆ ಮೇವನ್ನು ಸಾಗಿಸುತ್ತಿಲ್ಲ. ಇದರಿಂದ ಮೇವುಗಳ ಕೊರತೆಯಿಂದ ಹೈನುಗಾರಿಕೆಗೆ ಅಪಾರ ಹೊಡೆತ ಬಿದ್ದಿದೆ.

RELATED ARTICLES  ಉತ್ತರಕನ್ನಡ ಜಿಲ್ಲೆಯಲ್ಲಿ ೩೧ ಜನರಲ್ಲಿ ಕೊರೋನಾ ಸೋಂಕು : ಓರ್ವ ಸಾವು

 

ಬಲು ದುಬಾರಿಯಾದ ಹಸುವಿನ ಮೇವು…
ಪ್ರಸ್ತುತ ಒಣಹುಲ್ಲು ದರ ಒಂದು ಕಟ್ಟಿಗೆ 28 ರೂ. ದಾಟಿದ್ದು ಕನಿಷ್ಟ ಒಂದು ದಿನಕ್ಕೆ ಒಂದು ಹಸುವಿಗೆ 5-6 ಕಟ್ಟು ಒಣಹುಲ್ಲು ಬೇಕಾಗುತ್ತದೆ. ಕಟ್ಟಿಗೆ ಯಾವುದೆ ರೀತಿಯ ಕೆ.ಜಿ ಮಾಪನಗಳಾಗಲಿ ಇಲ್ಲದ ಪರಿಣಾಮ ಕೆಲವೊಮ್ಮೆ ದಿನಕ್ಕೆ 10 ಕಟ್ಟುಗಳನ್ನು ತಿನ್ನುವದುಂಟು. ಒಣಹುಲ್ಲಿನ ಜೊತೆಗೆ ಪ್ರತಿನಿತ್ಯ 2 ಬಾರಿ ಪೌಷ್ಟಿಕಾಂಶದ ಹಿಂಡಿಯನ್ನು ಹಾಕಲೆಬೇಕು. ಹಿಂಡಿಯ ದರ 50 ಕೆಜಿ ಚೀಲಕ್ಕೆ ಕನಿಷ್ಟ ಏನಿಲ್ಲವೆಂದರೂ 1,000 ರೂ. ದಾಟಿದೆ. ಹಿಂಡಿ ನೀಡಿಲ್ಲವೆಂದರೆ ರಾಸುಗಳು ಅಗತ್ಯಕ್ಕೆ ತಕ್ಕಂತೆ ಹಾಲನ್ನೆ ನೀಡುವದಿಲ್ಲ ಎಂಬುದು ರೈತರ ಅಭಿಪ್ರಾಯ.
ತೀರ ಕಡಿಮೆ ಹಾಲಿನ ದರ…
ಜಿಲ್ಲೆಯಲ್ಲಿ ವೃತ್ತಿಯನ್ನಾಗಿ ಹೈನುಗಾರಿಕೆ ಮಾಡುತ್ತಿರುವ ಹೈನುಗಾರರ ಒಕ್ಕೊರಲ ಕೂಗು ಇದಾಗಿದೆ. ಧಾರವಾಡ ಹಾಲು ಒಕ್ಕೂಟದಿಂದ ನೀಡುತ್ತಿರುವ ಹಾಲಿನ ದರ ತೀರ ಕಡಮೆಯಿದೆ. ದಕ್ಷಿಣ ಕನ್ನಡದಲ್ಲಿ ಪ್ರತಿ ಲೀ, 28 ರೂ. ಹಾಗೂ ಸರ್ಕಾರದ ಪ್ರೋತ್ಸಾಹ ಧನ 5 ರೂ. ಸೇರಿದಂತೆ ಒಟ್ಟೂ 33 ರೂ. ರೈತರಿಗೆ ಸಂದಾಯವಾಗುತ್ತದೆ. ಆದರೆ ಉತ್ತರಕನ್ನಡದಲ್ಲಿ ಮಾತ್ರ ಪ್ರತಿ ಲೀ ಹಾಲಿಗೆ ಒಟ್ಟೂ 26 ರೂ. ಸಂದಾಯವಾಗುತ್ತಿದೆ. ಉತ್ತರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಹಾಲಿನ ದರ ಹೋಲಿಕೆ ಮಾಡಿದಾಗ ಬರೋಬ್ಬರಿ 7 ರೂ. ಕಡಿಮೆಯಾದಂತಿದೆ. ಹಾಲಿನ ದರದ ಸಮಸ್ಯೆ ಒಂದಡೆಯಾದರೆ ಜಿಲ್ಲೆಯಲ್ಲಿ ಪ್ರಮುಖವಾಗಿ ಹಸುಗಳಿಗೆ ರೋಗಗಳ ಬಾಧೆಯು ಅಷ್ಟೇಯಾಗಿದೆ. ಹೆಚ್ಚಾಗಿ ಹಸುಗಲಿಗೆ ಕೆಚ್ಚಲುಬಾವು ಸಮಸ್ಯೆ ತೀರ ಕಾಡುತ್ತಿದ್ದು ಹೊತ್ತಿಗೆ 5 ಲೀ, ಹಾಲು ನೀಡುತ್ತಿದ್ದ ಆಕಳು ಕೆಚ್ಚಲು ಬಾವು ರೋಗಕ್ಕೆ ತುತ್ತಾದರೆ ಹಾಲನ್ನು ಕಡಿಮೆ ಮಾಡಿಬಿಡುತ್ತೆ ಎಂಬುದು ಹೈನುಗಾರರ ಗೋಳಾಗಿದೆ. ಧಾರವಾಡ ಹಾಲು ಒಕ್ಕೂಟ ಘಟಕವು ರಾಸುಗಳ ರೋಗಗಳ ಹಾಗೂ ಮೇವುಗಳನ್ನು ಪೂರೈಸಬೇಕಾದ ಅವಶ್ಯಕತೆ ಇದೆ ಎಂಬವುದು ಹೈನುಗಾರರ ಆಗ್ರಹವಾಗಿದೆ.

RELATED ARTICLES  ಸಾಂತಗಲ್ - ಶಿರಸಿ ಸಂಪರ್ಕ ರಸ್ತೆಯ ಅಭಿವೃದ್ಧಿ ಭರವಸೆ : ಕಾಲ್ನಡಿಗೆ ಮೂಲಕ ರಸ್ತೆ ಪರಿಶೀಲಿಸಿದ ದಿನಕರ ಶೆಟ್ಟಿ.