ಕುಮಟಾ: ಎಲ್ಲಾ ಕ್ಷೇತ್ರಗಳಲ್ಲೂ ಈಗ ಮೀಸಲಾತಿ ಎಂಬುದು ವಕ್ಕರಿಸಿಕೊಂಡಿದ್ದು, ಯಾವುದೇ ಮೀಸಲಾತಿ ಹೊಂದಿರದ ಕ್ಷೇತ್ರ ಕ್ರೀಡೆಯಾಗಿದೆ ಎಂದು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಮಾಜಿ ಜಿ.ಪಂ. ಸದಸ್ಯ ಗಜಾನನ ಪೈ ಹೇಳಿದರು. ಅವರು ಕುಮಟಾ ಮತ್ತು ಅಂಕೋಲಾ ಎರಡೂ ತಾಲ್ಲೂಕಿಗೆ ಅರ್ಧ ಭಾಗ ಒಳಪಡುವ ಗಡಗಾರ್ ಗ್ರಾಮದಲ್ಲಿ ಆರ್.ಸಿ.ಜಿ. ಸ್ಪೋರ್ಟ್ಸ್ ಕ್ಲಬ್ ನಿಂದ ಹಮ್ಮಿಕೊಂಡಿದ್ದ ಐದನೇ ವರ್ಷದ ಅಂಡರ್ ಆರ್ಮ್ ಟೂರ್ನಿಮೆಂಟ್ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದರು. ದೇವಗಿರಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಎಸ್.ಟಿ.ನಾಯ್ಕ ಮಾತನಾಡಿ ಕ್ರೀಡಾ ಚಟುವಟಿಕೆಗಳಿಂದ ಸುತ್ತಮುತ್ತಲಿನ ಗ್ರಾಮಗಳ ಜನರ ಪರಿಚಯ, ಒಡನಾಟ ಹೆಚ್ಚುವುದಲ್ಲದೆ ಸಂಘಟನಾತ್ಮಕವಾಗಿ ಬೆಳೆಯಲು ಇದು ಸಹಕಾರಿ ಎಂದರು.

RELATED ARTICLES  ಶ್ರೀ ರಾಘವೇಶ್ವರ ಭಾರತೀ ಶಾಲೆಯಲ್ಲಿ ಗೋಕರ್ಣ ಪಿ.ಎಸ್.ಐ ಅವರಿಂದ ಉಪನ್ಯಾಸ

ಮೊಗಟಾ ಗ್ರಾ.ಪಂ.ಅಧ್ಯಕ್ಷ ದೇವಾನಂದ ನಾಯಕ, ಸದಸ್ಯ ಸಂದೇಶ ನಾಯ್ಕ, ಸುಂಕಸಾಳ ಗ್ರಾ.ಪಂ.ಅಧ್ಯಕ್ಷ ಸದಾನಂದ ನಾಯಕ, ಉದ್ಯಮಿ ಚಂದ್ರಹಾಸ ನಾಯಕ, ಕಿರಣ ಹೆಬ್ಬಾರ್, ನಾಡವರ ಪ್ರೀಮಿಯರ್ ಲೀಗ್ ಅಧ್ಯಕ್ಷ ಜಗದೀಶ ನಾಯಕ, ಉಪವಲಯ ಅರಣ್ಯಾಧಿಕಾರಿ ಗೌರಿ ಶಂಕರ ಮತ್ತಿತರರು ಇದ್ದರು. ಗಜಾನನ ಪೈ ಅವರು ಆರ್.ಸಿ.ಜಿ. ಸ್ಪೋರ್ಟ್ಸ್ ಗೆ ಬ್ಯಾಟ್, ಸ್ಟಂಪ್ ಹಾಗೂ ಚೆಂಡುಗಳನ್ನು ಕೊಡುಗೆಯಾಗಿ ನೀಡಿ ಪ್ರೋತ್ಸಾಹಿಸಿದರು. ಸುಬ್ರಾಯ ಹೆಗಡೆ ಸ್ವಾಗತಿಸಿದರು. ವಿವೇಕ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.

RELATED ARTICLES  ಈರುಳ್ಳಿಗೆ ಕೀಟ ಬಾಧೆ: ಸೂಕ್ತ ಔಷಧಿ ಹಾಗೂ ಹಾನಿ ಪರಿಹಾರ ವಿತರಿಸಲು ಒತ್ತಾಯ