ಶಿರಸಿ: ತಾಲೂಕಿನ ಶಿವಳ್ಳಿ ಗ್ರಾಮದ ಹೆಗಡೆಕಟ್ಟಾ ದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಸಿಂಧು ಸಾಮಾನ್ಯ ಸೇವಾ ಕೇಂದ್ರ ಉದ್ಘಾಟನೆಗೊಂಡಿತು. ಶಿವಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರಾದ ವೀಣಾ ಭಟ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆರಂಭಗೊಂಡಿರುವ ಸಾಮಾನ್ಯ ಕೇಂದ್ರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು. ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ ಪಿ ಹೆಗಡೆ ಸಾಮಾನ್ಯ ಸೇವಾ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ದಾಖಲೆಪತ್ರಗಳನ್ನು ಸಾಮಾನ್ಯ ಜನತೆ ಮಾಡಿಸಲು ತೀವ್ರ ತೊಂದರೆ ಎದುರಿಸುತ್ತಿದ್ದು, ಸಾಮಾನ್ಯ ಕೇಂದ್ರ ಈ ನಿಟ್ಟಿನಲ್ಲಿ ಜನತೆಗೆ ಸೇವೆ ಒದಗಿಸಲು ಮುಂದಾಗಬೇಕು, ಅದೇ ರೀತಿ ಸಾರ್ವಜನಿಕರು ಸೌಲಭ್ಯಗಳನ್ನು ಪಡೆದುಕೊಳ್ಳುವಾಂತಾಗಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಸಿದ್ದಾಪುರದ ಯೋಜನಾಧಿಕಾರಿಗಳು ಸಾಮಾನ್ಯ ಸೇವಾ ಕೇಂದ್ರದ ಅಡಿಯಲ್ಲಿ ಬರತಕ್ಕಂತಹ ಸೇವೆಗಳ ಪರಿಚಯವನ್ನು ಮಾಡಿಕೊಟ್ಟರು.
ಗ್ರಾಮ ಪಂಚಾಯತ ಉಪಾಧ್ಯಕ್ಷ ಎ ವಿ ಹೆಗಡೆ, ಸಮಾಜಿಕ ಕಾರ್ಯಕರ್ತ ಪ್ರಸನ್ನ ಭಟ್ಟ, ಸೇವಾ ಪ್ರತಿನಿಧಿ ಶ್ರೀಗಂಗಾ ದೇವಾಡಿಗ, ಮಾಲತಿ ಎನ್, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರು ಊರ ನಾಗರಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಂತಲಾ ಆರ್. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಮಧುಮತಿ ಸ್ವಾಗತಿಸಿದರು, ಮೇಲ್ವಿಚಾರಕರಾದ ಸುಬ್ರಹ್ಮಣ್ಯ ಕಾರ್ಯಕ್ರಮವನ್ನು ನಿರ್ವಹಿಸಿದರು, ಲಲಿತಾ ಅವರು ವಂದಿಸಿದರು.