ಕುಮಟಾ : ಉತ್ತರಕನ್ನಡದ ಸಮುದ್ರಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳು, ಆದರೆ ಸಮುದ್ರಗಳು ಅಷ್ಟೇ ಅಪಾಯಕಾರಿಯೂ ಆಗಿದೆ. ಸಮುದ್ರದ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಪ್ರವಾಸಿಗನನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಭಾನುವಾರ ಸಂಜೆ ಗೋಕರ್ಣ ಮುಖ್ಯ ಕಡಲತೀರದಲ್ಲಿ ನಡೆದಿದೆ. ಕೋವಿಡ್ ನಿಯಮ ಬದಲಾಗುತ್ತಿರುವಂತೆ ಮತ್ತೆ ಕಡಲತೀರಕ್ಕೆ ಪ್ರವಾಸಿಗರು ಲಗ್ಗೆ ಇಡುತ್ತಿದ್ದು, ನೀರಿನಲ್ಲಿನ ಆಟವಾಡುತ್ತಾ ಮೈಮರೆತು ಜೀವಾಪಾಯ ತಂದುಕೊಳ್ಳುವುದು ಮತ್ತೆ ಪ್ರಾರಂಭವಾಗಿದೆ.
ಧಾರಡವಾಡ ಜಿಲ್ಲೆ ಕಲಘಟಗಿಯ ಒಂದೇ ಕುಟುಂಬದ ಆರು ಜನ ಇಲ್ಲಿಗೆ ಆಗಮಿಸಿದ್ದು, ಪ್ರವಾಸಿಗರು, ಸಮುದ್ರದಲ್ಲಿ ಈಜಾಡಲು ತೆರಳಿದ್ದಾರೆ ಆ ವೇಳೆ ಓರ್ವ ವ್ಯಕ್ತಿ ರಭಸದ ಅಲೆಗೆ ಕೊಚ್ಚಿಹೋಗುತ್ತಿರುವುದನ್ನು ಕರ್ತವ್ಯನಿರತ ಲೈಫ್ ಗಾರ್ಡ ಸಿಬ್ಬಂದಿ ಗಮನಿಸಿದ್ದು, ತಕ್ಷಣ ರಕ್ಷಣೆಗೆ ಧಾವಿಸಿ ಜೀವಾಪಾಯದಿಂದ ಪಾರುಮಾಡಿದ್ದಾರೆ.
ಸೋಮಪ್ಪ ಬಾಳಪ್ಪನವರ ಜೀವಾಪಾಯದಿಂದ ಪಾರಾಗಿ ಬಂದವರಾಗಿದ್ದು, ಇವರು ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದು ಬಂದಿದೆ. ಜೀವರಕ್ಷಕ ಸಿಬ್ಬಂದಿಗಳಾದ ಮಾರುತಿ ಪಿ., ಶಿವಪ್ರಕಾಶ ಅಂಬಿಗ, ಜೀವರಕ್ಷಿಸಿದವರಾಗಿದ್ದು, ಇವರಿಗೆ ಪ್ರವಾಸಿ ಮಿತ್ರ ಸಿಬ್ಬಂದಿ ರಘು ನಾಯ್ಕ, ಪೊಲೀಸ್ ಸಿಬ್ಬಂದಿಗಳಾದ ರಾಘವೇಂದ್ರ ನಾಯ್ಕ, ನಾಗರಾಜ ನಾಯ್ಕ ರಕ್ಷಣಾ ಕಾರ್ಯಕ್ಕೆ ಸಹಾಯ ಮಾಡಿದ್ದಾರೆ.