ಕುಮಟಾ : ಕೊರೋನಾ ಸಾಂಕ್ರಾಮಿಕ ರೋಗ ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರದ  ಆದೇಶದಂತೆ ಮತ್ತು ವ್ಯಕ್ತಿಗಳ  ಆರೋಗ್ಯದ ಹಿತದೃಷ್ಟಿಯಿಂದ ಪ್ರತಿಯೊಬ್ಬರು ಎರಡು ಡೋಸ್ ಲಸಿಕೆ ಪಡೆಯಲೇ ಬೇಕಾಗಿರುತ್ತದೆ. ಆದರೆ ಪಟ್ಟಣದಲ್ಲಿ ಇನ್ನೂ 2500 ಜನರು ಎರಡನೇ ಡೋಸ್ ಪಡೆಯದೇ ಇರುವುದನ್ನು ಪತ್ತೆ ಹಚ್ಚಲಾಗಿದೆ. ಇವರುಗಳಿಂದ ಅವರ ಕುಟುಂಬಕ್ಕೆ ಮತ್ತು ಸಮಾಜಕ್ಕೆ ತೊಂದರೆ ಯಾಗಬಹುದಾಗಿದೆ. ಹಾಗಾಗಿ  ಮೂರು ದಿನದೊಳಗೆ ಎರಡನೇ ಡೋಸ್ ಪಡೆಯಲೇ ಬೇಕೆಂದು ಪ್ರಕಣೆಯ ಮೂಲಕ ಸೂಚಿಸಲಾಗಿದೆ.

RELATED ARTICLES  ಕೇರಳದಲ್ಲಿ ನಡೆದ ಅಕಾಡೆಮಿ ಕಾರ್ಯಾಗಾರದಲ್ಲಿ ಉಮೇಶ ಮುಂಡಳ್ಳಿ ಭಾವಗೀತೆ ಲೋಕಾರ್ಪಣೆ

ತಪ್ಪಿದಲ್ಲಿ ಅಂಥವರ ಹೆಸರನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುವುದು. ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಕುಮಟಾ ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಟಣೆಯ ಮೂಲಕ ಸೂಚಿಸಿದ್ದಾರೆ.

RELATED ARTICLES  ಮಾನಸಿಕ ಅಸ್ವಸ್ಥನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಉಪಚರಿಸಿ ಮಾನವೀಯತೆ ಮೆರೆದ ಭಟ್ಕಳ ಪೋಲೀಸರು.