ಕಾರವಾರ :  ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ನ ಪ್ರಕಾರ ಇಂದು  699 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ವರದಿಯಾಗಿದ್ದು,  ಕೊರೋನಾದಿಂದಾಗಿ ಒಂದು ಸಾವು ಸಂಭವಿಸಿದೆ ಎನ್ನಲಾಗಿದೆ.

ಹೆಲ್ತ ಬುಲೆಟಿನ್ ಪ್ರಕಾರ ಕಾರವಾರದಲ್ಲಿ 38, ಅಂಕೋಲಾದಲ್ಲಿ 62, ಕುಮಟಾದಲ್ಲಿ 22, ಹೊನ್ನಾವರ 55, ಭಟ್ಕಳದಲ್ಲಿ 14, ಶಿರಸಿಯಲ್ಲಿ 48, ಸಿದ್ದಾಪುರದಲ್ಲಿ 88, ಯಲ್ಲಾಪುರದಲ್ಲಿ 58, ಮುಂಡಗೋಡ 164, ಹಳಿಯಾಳದಲ್ಲಿ 108, ಮತ್ತು ಜೋಯಿಡಾದಲ್ಲಿ 42, ಒಟ್ಟೂ 699 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  ದಿವಂಗತರಾದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಮತ್ತು ಶ್ರೀ ಗಣೇಶ ಗಣಪತಿ ಹೆಗಡೆ ಸೂರನ್ ಇವರ ಸವಿನೆನಪಿನಲ್ಲಿ ಕಾರ್ಯಕ್ರಮ

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 3026 ಆಗಿದ್ದು, ಅವರಲ್ಲಿ 85 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 2941 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಕಾರವಾರ 98, ಅಂಕೋಲಾ‌ 68, ಕುಮಟಾ 55, ಹೊನ್ನಾವರ 91, ಭಟ್ಕಳ 42, ಶಿರಸಿ 148, ಸಿದ್ದಾಪುರ 96, ಯಲ್ಲಾಪುರ 133, ಮುಂಡಗೋಡ 40, ಹಳಿಯಾಳ 37, ಜೋಯ್ಡಾ 27 ಜನರು ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 835 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  ಸುವರ್ಣ ನಾಗಾಭರಣ ವಿಶೇಷ ಪೂಜೆ ನೆರವೇರಿಸಿದ ಶ್ರೀ ಶ್ರೀ ಆತ್ಮಾನಂದ ಸ್ವಾಮೀಜಿ

ಇದು ನಮ್ಮ ಕಳಕಳಿ…
ಕೊರೋನಾ ಬಗ್ಗೆ ಜನತೆ ಸಾಕಷ್ಟು ಮುಂಜಾಗ್ರತಾ ಕ್ರಮ‌ಕೈಗೊಳ್ಳುವ ಅಗತ್ಯತೆ ಇದ್ದು, ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನಾವೂ ನಿಮ್ಮಲ್ಲಿ ವಿನಂತಿಸುತ್ತೇವೆ.