ಭಟ್ಕಳ : ರೈಲು ಹಳಿ ಕೆಲಸಕ್ಕೆ ಬಂದ ವ್ಯಕ್ತಿಯೊಬ್ಬ ರೈಲು ಬಡಿದು ಸಾವನ್ನಪ್ಪಿರುವ ದುರ್ಘಟನೆ ತಾಲೂಕಿನ ಮುರ್ಡೇಶ್ವರದಲ್ಲಿ ನಡೆದಿದೆ. ಉತ್ತರಪ್ರದೇಶದ ರಾಧೆ ಸುಕನ್‌ (52) ಸಾವಿಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಅವರು ರೈಲು ಹಳಿ ಕೆಲಸಕ್ಕಾಗಿ ಉತ್ತರಪ್ರದೇಶದ ಕೆಲಸದವರೊಂದಿಗೆ ಬಂದಿದ್ದು ರಾತ್ರಿ ಹಳಿಯ ಸಮೀಪ ನಡೆದು ಹೋಗುತ್ತಿದ್ದಾಗ ರೈಲು ಬಡಿದು ಈತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES  ಶ್ರೀ ಶ್ರೀ ಪಟ್ಟದ ಚಿನ್ಮಯ ಸ್ವಾಮಿಗಳಿಗೆ ಗೋಕರ್ಣ ಗೌರವ