ಸಿದ್ದಾಪುರ: ಕೃಷಿ ಕೆಲಸದಲ್ಲಿ ತೊಡಗಿದ್ದ ವ್ಯಕ್ತಿಯೋರ್ವ ಏಕಾಏಕಿ ಕುಸಿದು ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಅರೆಂದೂರಿನಲ್ಲಿ ನಡೆದಿದೆ. ಗಣಪ ತಿ ಮಡಿವಾಳ ಎಂಬಾತನೇ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ. ಅರೆಥದೂರು ಸರ್ವೆ ನಂಬರ್ 41 ರಲ್ಲಿರುವ ಗದ್ದೆಗೆ ಭತ್ತದ ನಾಟಿ ಮಾಡುವ ಉದ್ದೇಶದಿಂದ ಗದ್ದೆ ಹಾಳೆಯನ್ನು ಗುದ್ದಲಿಯಿಂದ ಕಡಿಯುತ್ತಿದ್ದಾಗ ಸಂಜೆ 5.35 ಗಂಟೆ ಸುಮಾರಿಗೆ ಏಕಾಏಕಿ ಕುಸಿದು ಬಿದ್ದು ಗದ್ದೆಯಲ್ಲಿ ಮೃತಪಟ್ಟ ಕುರಿತು ಮೃತನ ಪತ್ನಿ ತುಳಸಿ ಗಣಪತಿ ಮಡಿವಾಳ ಸಿದ್ದಾಪುರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.