ಭಟ್ಕಳ: ಚಲಿಸುತ್ತಿದ್ದ ಮೋಟಾರ್ ಬೈಕ್ ಹಾಗೂ ಎಕ್ಟಿವ್ ಹೊಂಡಾ ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ನಡೆದ ಪರಿಣಾಮವಾಗಿ ಮಹಿಳೆಯೋರ್ವರು ಸಾವನ್ನಪ್ಪಿದ್ದರೆ, ಮೂವರು ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ತಾಲೂಕಿನ ಬೆಂಗ್ರೆ ಸೋಮಯ್ಯನಮನೆ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ನಡೆದಿದೆ. ಮೃತ ಮಹಿಳೆಯನ್ನು ತಾಲೂಕಿನ ಕೈಕಿಣಿ ಗ್ರಾಪಂ ಕೊನಕಾರ ನಿವಾಸಿ ಮಾಸ್ತಿ ಶಂಕರ ದೇವಡಿಗ ಎಂದು ಗುರುತಿಸಲಾಗಿದೆ.

RELATED ARTICLES  ಇಲಾಖೆಯ ಬೇಜವಾಬ್ಧಾರಿ ಜನತೆಗೆ ಸಿಗುತ್ತಿಲ್ಲ ರೇಶನ್!

ಎಕ್ಟಿವ್ ಹೊಂಡಾ ಚಲಾಯಿಸುತ್ತಿದ್ದ ಈಕೆಯ ಪತಿ ಶಂಕರ ದೇವಡಿಗ, ಮೋಟಾರ್ ಬೈಕ್‌ನಲ್ಲಿದ್ದ ಹೊನ್ನಾವರದ ನಿವಾಸಿಗಳಾದ ಜಸ್ಮಿತ್ ಹಾಗೂ ಜೋತ್ಸಾ ಗಾಯಗೊಂಡವರಾಗಿದ್ದಾರೆ. ಶಂಕರ ದೇವಾಡಿಗರಿಗೆ ಶಿರಾಲಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೆ, ಜಸ್ಮಿತ್ ಹಾಗೂ ಜೋತ್ಸಾರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.ಈ ಘಟನೆ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಕರಡಿ ದಾಳಿ: ರೈತಗೆ ಗಂಭೀರ ಗಾಯ.