ಗೋಕರ್ಣ: ರೆಕ್ಕೆಗೆ ತೀವ್ರ ಪೆಟ್ಟಾಗಿ ಮೇಲೆ ಹಾರಲಾಗದೇ ಒದ್ದಾಡುತ್ತಿದ್ದ ಹದ್ದಿಗೆ ಚಿಕಿತ್ಸೆ ಒದಗಿಸಿದ ಮಾನವೀಯ ಘಟನೆ ತದಡಿ ಬಂದರಿನಲ್ಲಿ ನಡೆದಿದೆ. ಹದ್ದಿನ ನರಳಾಟ ನೋಡಿದ ಗೋಕರ್ಣ ಗ್ರಾ.ಪಂ.ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಶೇಖರ ನಾಯ್ಕ ಅವರು ಕೂಡಲೇ ಪ್ರಾಣಿ ಪ್ರಿಯ ಹಾಗೂ ಗೋಕರ್ಣದ ಗ್ರಾಮ ಪಂಚಾಯತ್ ಸದಸ್ಯರಾದ ಸುಜಯ ಶೆಟ್ಟಿ ಗೋಕರ್ಣ ಇವರಿಗೆ ವಿಷಯ ತಿಳಿಸಿದ್ದು, ಸುಜಯ ಕೂಡಲೇ ಪಶು ವೈದ್ಯಕೀಯ ಸಹಾಯಕರಾದ ವಿನಾಯಕ ಹುಲಸ್ವಾರ್ ಹಾಗೂ ಪಕ್ಷಿಗಳ ಬಗ್ಗೆ ವಿಶೇಷ ಮಾಹಿತಿ ಉಳ್ಳವರಾದ ಮೇಲಿನಕೇರಿಯ ತುಕಾರಾಮ ಹುಲಸ್ವಾರ್ ಅವರನ್ನು ಸ್ಥಳಕ್ಕೆ ಕರೆತಂದು ಗಾಯಗೊಂಡ ಹದ್ದಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಸದ್ಯ ಹದ್ದನ್ನು ಅರಣ್ಯ ಇಲಾಖೆಯ ಸುಪರ್ದಿಗೆ ನೀಡಲಾಗಿದೆ.