ಅಂಕೋಲಾ : ಕನ್ನಡ ನಾಡಿನ ಕಲೆ ಸಂಸ್ಕ್ರತಿಯನ್ನು ಉಳಿಸುವಲ್ಲಿ ಮಹತ್ತರವಾದ ಪಾತ್ರ ವಹಿಸುವ ಕಲಾವಿದರು ಕರುನಾಡಿನ ಆಸ್ತಿ. ಕಲಾವಿದರಿಗೆ ಸರಕಾರದಿಂದ ವಿಶೇಷ ಸವಲತ್ತುಗಳು ಸಿಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಹೇಳಿದರು. ಅವರು ಅವರ್ಸಾದ ಶ್ರೀ ಮ್ಹಾಲಮಾಸ್ತಿ ಅರುಣೋದಯ ತರುಣ ನಾಟ್ಯ ಮಂಡಳಿ ಆಯೋಜಿಸಿದ್ದ ಕವಿ ಸುಜೀತ ಎನ್ ನಾಯ್ಕ ರಚಿಸಿದ 11ನೇ ನಾಟಕ ಕೃತಿ ಧರಣಿಮಂಡಲ ಮಧ್ಯದೊಳಗೆ ಬೆಂಕಿಬಿರುಗಾಳಿ ಹಸ್ತಪ್ರತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಕೆಲವು ಸಂದಿಗ್ಧ ಪರಿಸ್ಥಿತಿಗಳಿಂದಾಗಿ ಕಲಾವಿದರು ಸಂಕಷ್ಟದಲ್ಲಿದ್ದಾರೆ. ನಾಡಿನ ಕಲೆ ಮತ್ತು ಸಂಸ್ಕ್ರತಿಯನ್ನು ಉಳಿಸಿಕೊಳ್ಳಲು ಸರಕಾರ ವಿಶೇಷ ಸವಲತ್ತುಗಳನ್ನು ನೀಡುವಂತೆ ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪಿಸುವದಾಗಿ ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉದ್ಯಮಿ ಸುರೇಶ ನಾಯಕ ಮಾತನಾಡಿ ರಂಗಭೂಮಿ ಸಾಮಾನ್ಯ ಜನರೆಲ್ಲರ ಅಚ್ಚು ಮೆಚ್ಚಿನ ಕಲೆ, ಸುಜೀತ ನಾಯ್ಕರವರ ಕೃತಿಗಳು ಜಿಲ್ಲೆಯಾದ್ಯಂತ ಅತಿ ಹೆಚ್ಚು ಪ್ರದರ್ಶನಗೊಳ್ಳುತ್ತಿವೆ ಇಂತಹ ಲೇಖಕರನ್ನು ಪ್ರೋತ್ಸಾಹಿಸಬೇಕು ಎಂದರು ಅಲ್ಲದೆ ಅವರ ನೂತನ ಕೃತಿಯನ್ನು ಪುಸ್ತಕವಾಗಿ ಸ್ವಂತ ಖರ್ಚಿನಲ್ಲಿ ಮುದ್ರಿಸಿಕೊಡುವದಾಗಿ ಹೇಳಿದರು.

RELATED ARTICLES  ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣೆಯ ವೈದ್ಯಕೀಯ ಶಿಬಿರ


ಪತ್ರಕರ್ತ ರಾಘು ಕಾಕರಮಠ ಮಾತನಾಡಿ ತಾಲೂಕಿನ ರಂಗಭೂಮಿಯ ಖ್ಯಾತ ಲೇಖಕರಾದ ಸುಜೀತ ನಾಯ್ಕರಂತಹ ಲೇಖಕರ ಕೃತಿಗಳನ್ನು ಮುದ್ರಿಸಲು ಪ್ರಾಯೋಜಕರು ಮುಂದಾಗಬೇಕು ಎಂದರು. ರಂಗಭೂಮಿ ಕಲಾವಿದರ ವೇದಿಕೆಯ ಅಧ್ಯಕ್ಷ ನಾಗರಾಜ ಜಾಂಬಳೇಕರ ಮಾತನಾಡಿ ರಂಗಭೂಮಿ ಕಲಾವಿದರು ಕಳೆದ 5 ವರ್ಷಗಳಿಂದ ಕಾರ್ಯಕ್ರಮಗಳಿಲ್ಲದೆ ಪಟ್ಟ ಸಂಕಷ್ಟಗಳ ಬಗ್ಗೆ ವಿವರಿಸಿದರು.

ವೇದಿಕೆಯಲ್ಲಿ ಯಕ್ಷಗಾನ ಕಲಾವಿದ ಹಾಗೂ ಬಿಜೆಪಿ ಮಂಡಲಾಧ್ಯಕ್ಷ ಸಂಜಯ್ ನಾಯ್ಕ ಭಾವಿಕೇರಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸುಭಾಷ ಎಚ್ ನಾಯಕ, ನ್ಯೂಸ್ 18 ವರದಿಗಾರ,ಪತ್ರಕರ್ತ ದರ್ಶನ ನಾಯ್ಕ ಕಾರವಾರ ರಾಜ್ಯ ಪ್ರಶಸ್ತಿ ವಿಜೇತ ರಂಗಭೂಮಿ ಕಲಾವಿದ ಚೇತನ ಮ್ಹಾಳ್ಸೇಕರ್, ಕಲಾವಿದ ಶ್ರೀನಿವಾಸ ರಾಮನಾಥಕರ್, ಜಾನಪದ ಕಲಾವಿದ ಮಂಜುನಾಥ ಮುದ್ಗೇಕರ ಲೇಖಕರಿಗೆ ಹಾಗೂ ನಾಟಕ ಮಂಡಳಿಗೆ ಶುಭ ಹಾರೈಸಿದರು.

RELATED ARTICLES  ಉರ್ದು ಶಾಲೆಯಲ್ಲಿ ಕನ್ನಡ ಹಾಡುಗಳದೇ ಕಲರವ


ವೇದಿಕೆಯಲ್ಲಿ ಗಣಪತಿ ದುಮ್ಮಾ ಉಳ್ವೇಕರ್ ಹಾಗೂ ಹಿರಿಯ ರಂಗಭೂಮಿ ಕಲಾವಿದ ದಾಮು ಎಮ್ ನಾಯ್ಕ ಅವರ್ಸಾ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮ್ಹಾಲಮಾಸ್ತಿ ಸಂಸ್ಥಾನದ ಸಂಚಾಲಕರು ನಾಗೇಂದ್ರ ಎಮ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ನಂತರ ಜಿಲ್ಲೆಯ ಖ್ಯಾತ ಕಲಾವಿದರಿಂದ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿತು.